ಸಹಕಾರ ಸಿಂಧು
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ

ಗಿರವಿ ಮತ್ತು ಲೇವಾದೇವಿಗಾರರು    ||    ಚೀಟಿ ನಿಧಿಗಳು

 

ಚೀಟಿ ನಿಧಿ ಕಾಯ್ದೆ 1982

 
  • 2011-12,2012-13,2013-14 ನೇ ಸಾಲಿಗೆ ಚೀಟಿ ನಿಬಂಧಕರ ಪರವಾಗಿ ಚೀಟಿ ನಿಧಿ ಅಧಿನಿಯಮದಡಿ ದಾವೆಗಳನ್ನು ಇತ್ಯರ್ಥ ಪಡಿಸುವ ಚೀಟಿ ನಿಬಂಧಕರ ನಾಮಿನಿಗಳ ಪಟ್ಟಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಕೆ ಎಂ ಆಶಾ
ಸ.ಸಂ ಅಪರ ನಿಬಂಧಕರು
(ಕಾನೂನು ಕೋಶ
)(ಪ್ರಭಾರ),
ದೂರವಾಣಿ ಸಂಖ್ಯೆ:080-22268436,
ಇ-ಮೇಲ್ : jrcs-legal-ka@nic.in

ಪುಂಡಲಿಕ್ ಎಲ್ ಸಾದುರೆ
ಸ. ಸಂ. ಸಹಾಯಕ ನಿಬಂಧಕರು(ಲೇವಾದೇವಿ
),
ದೂರವಾಣಿ ಸಂಖ್ಯೆ:080-22269636/37 Ext : 223,
ಇ-ಮೇಲ್: arcs-ml1-ka@nic.in

       ಚಿಟ್ ಫಂಡ್ ಕಾಯ್ದೆ 1982 ನ್ನು ಕೇಂದ್ರ ಕಾಯ್ದೆಯಾಗಿ ಚಿಟ್ಸ್ ಫಂಡ್ ವ್ಯವಹಾರವನ್ನು ನಿಯಂತ್ರಿಸುವ ದ್ರಷ್ಟಿಯಿಂದ ಜಾರಿಗೆ ತರಲಾಯಿತು.

      ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಚಿಟ್ಸ್ ಫಂಡ್ ವ್ಯವಹಾರವನ್ನು ನಿರ್ವಹಿಸಬೇಕಾದರೆ ಚೀಟಿ ನಿಧಿ ಕಾಯ್ದೆ 1982 ಪ್ರಕರಣ 4(1) ಮತ್ತು ಪ್ರಕರಣ9(2) ರನ್ವಯ ಕ್ರಮವಾಗಿ ಪೂರ್ವ ಮಂಜೂರಾತಿ ಆದೇಶ ಹಾಗೂ ಪ್ರಾರಂಭಿಕ ದ್ರಡೀಕರಣ ಪತ್ರ ಪಡೆಯುವುದು ಅವಶ್ಯಕವಾಗಿರುತ್ತದೆ.

      ಪೂರ್ವ ಮಂಜೂರಾತಿ ಪಡೆಯುವ ಅರ್ಜಿಯ ಜೊತೆಗೆ ಪ್ರಕರಣ4(2) ರನ್ವಯ ಚೀಟಿ ಮೌಲ್ಯ ಐದು ಒಕ್ಷದವರೆಗೆ ಮೊತ್ತಕ್ಕೆ .25 ಶುಲ್ಕವನ್ನು ಅಥವಾ ರೂ.250/-00 ಇವೆರಡಲ್ಲಿ ಯಾವುದು ಹೆಚ್ಚಿನದು ಅದನ್ನು ಪಾವತಿಸತಕ್ಕದ್ದು. ಐದು ಲಕ್ಷ ಮೇಲ್ಪಟ್ಟು ಚೀಟಿ ಮೌಲ್ಯದ ಶೇ0.5 ರಿಂದು ರೂ.10,000/-00 ರವರೆಗೆ ಯಾವುದು ಕಡಿಮೆಯೋ ಅದನ್ನು ಪಾವತಿಸತಕ್ಕದ್ದು.

     ಚೀಟಿ ಮೊತ್ತಕ್ಕೆ ಅನುಗುಣವಾಗಿ ವಿವಿಧ ಅಧಿಕಾರಿಗಳಿಗೆ ಕಾಯ್ದೆ ಮತ್ತು ನಿಯಮಗಳಲ್ಲಿ ಅದಿಕಾರದ ಪ್ರತ್ಯಾಯೋಜನೆ ಕುರಿತು ವಿವರ

ಕ್ರ.ಸಂ
ಅಧಿಕಾರಿಗಳ ಶ್ರೇಣಿ
ಒಟ್ಟು
ಕಾಯ್ದೆ & ನಿಯಮಗಳಲ್ಲಿಯ ಅಧಿಕಾರದ ಪ್ರತ್ಯಾಯೋಜನೆ
1
ಉಪ ವಿಭಾಗದ ಎಲ್ಲಾ ಚೀಟಿ ನಿಧಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ರೂ.15 ಲಕ್ಷದವರೆಗಿನ ಚೀಟಿ ಮೊತ್ತ ಪ್ರಕರಣಗಳು: 4(1), (2), (3) & (4), 6(2), 8(2), 11(2), 14, 47(4) & 49.

ನಿಯಮ: 3

2
ಜಿಲ್ಲೆ ಎಲ್ಲ ಚೀಟಿ ನಿಧಿ ಉಪ ನಿಬಂಧಕರು ರೂ15 ಲಕ್ಷಕ್ಕಿಂತ ಹೆಚ್ಚಿನ ಚೀಟಿ ಮೊತ್ತಕ್ಕೆ ಪ್ರಕರಣಗಳು: 4(1), (2), (3) & (4), 6(2), 8(2), 11(2), 14, 47(4) & 49.

ನಿಯಮ: 3

3
ಚೀಟಿ ನಿಬಂಧಕರು ಎಲ್ಲಾ ಚೀಟಿಗಳು ನಿಬಂಧಕರ ವ್ಯಾಪ್ತಿಗೆ ಒಳಪಡುತ್ತವೆ,
ಚೀಟಿ ಮೊತ್ತ ಅನ್ವಯಿಸುವುದಿಲ್ಲ
ಪ್ರಕರಣಗಳು: 74 & 81

ನಿಯಮ: 37 & 41

31-3-2017 ಕ್ಕೆ ಇದ್ದಂತೆ ಚೀಟಿ ಸಂಸ್ಥೆಗಳ ಪ್ರಗತಿ ವಿವರ


(ರೂ.ಲಕ್ಷಗಳಲ್ಲಿ)
ಕ್ರ.ಸಂ
ವಿವರ
2016-2017
1
ಚೀಟಿ ಸಂಸ್ಥೆಗಳ ಒಟ್ಟು ಸಂಖ್ಯೆ
1223
2
ಚೀಟಿ ಗುಂಪುಗಳ ಒಟ್ಟು ಸಂಖ್ಯೆ
11,886
3
ಒಟ್ಟು ಚೀಟಿ ಮೌಲ್ಯ
464.05
4
ಚೀಟಿ ಸಂಸ್ಥೆಗಳಿಂದ ಪಾವತಿಸಿದ ಒಟ್ಟು ಶುಲ್ಕ
73.5

ದಂಡನೆಯ ಪ್ರಕರಣಗಳು:

      ಯಾವುದೇ ವ್ಯಕ್ತಿ, ಸಂಸ್ಥೆ, ಚೀಟಿ ನಿಧಿ ಕಾಯ್ದೆಯಲ್ಲಿರುವ ಅವಕಾಶಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಚೀಟಿ ವ್ಯವಹಾರ ನಡೆಸಿದಲ್ಲಿ ಅಂತಹ ಪ್ರಕರಣಗಳಲ್ಲಿ ಚೀಟಿ ನಿಧಿ ಕಾಯ್ದೆ 1982 ಪ್ರಕರಣ 76 ರಡಿಯಲ್ಲಿ ಎರಡು ವರ್ಷಗಳ ಅವಧಿಗೆ ಜೆಲು ಶಿಕ್ಷೆ ಅಥವಾ ರೂ.5000/- ವರೆಗಿನ ದಂಡವನ್ನು ಒಳಗೊಂಡಂತೆ ಎರಡನ್ನು ವಿಧಿಸಲು ಅವಕಾಶವಿರುತ್ತದೆ.Top