ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

 

ಇತರೆ ಸಹಕಾರ ಸಂಘಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಕೆ ಎಸ್ ನವೀನ್ , ಸ.ಸಂಗಳ ಅಪರ ನಿಬಂಧಕರು
(ವಸತಿ & ಇತರೆ ),
ದೂರವಾಣಿ ಸಂ. :080-22261873,
ಇ-ಮೇಲ್ : addlrcs-im-ka@nic.in

ಅಜ್ಮ್ ತ್ ಉಲ್ಲಾ ಖಾನ್,
ಸ.ಸಂಗಳ.ಸಹಾಯಕ ನಿಬಂಧಕರು

(ವಸತಿ & ಇತರೆ )
ದೂರವಾಣಿ ಸಂ. :080-22269636/37 Ext: 220,
ಇ-ಮೇಲ್ : arcs-hsg-ka@nic.in

Topದೊಡ್ಡ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘಗಳು (ಲ್ಯಾಂಪ್ಸ್) ಮತ್ತು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿ., ಮೈಸೂರು.

ರಾಜ್ಯದಲ್ಲಿ ಒಟ್ಟು 23 ದೊಡ್ಡ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘಗಳು (ಲ್ಯಾಂಪ್ಸ್) ಕಾರ್ಯ ನಿರ್ವಹಿಸುತ್ತಿವೆ. ಈ ಸಂಘಗಳು ಆದಿವಾಸಿ ಜನಾಂಗದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸುಧಾರಣೆಯ ಸಲುವಾಗಿ ಆಯೋಜಿಸಲಾಗಿದೆ
ಲ್ಯಾಂಪ್ಸ್ ಸಹಕಾರ ಸಂಘಗಳ ಚಟುವಟಿಕೆಗಳು ಈ ಕೆಳಗಿನಂತಿವೆ :-
 • ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆ ಹಾಗೂ ಅದಕ್ಕೆ ಮಾರುಕಟ್ಟೆ ಒದಗಿಸುವ ಮೂಲಕ ಬುಡಕಟ್ಟು ಜನಾಂಗದವರಿಗೆ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿ ಸುಧಾರಣೆಗೆ ಕ್ರಮವಿಡುವುದು.
 • ಸಂಘದ ಸದಸ್ಯರಿಗೆ ಅಗತ್ಯ ವಸ್ತುಗಳ ಹಾಗೂ ಗ್ರಾಹಕ ಸರಕುಗಳ ವಿತರಣೆ ಮತ್ತು ಎಸ್ ಸಿ/ಎಸ್ ಟಿ ಸಮುದಾಯದ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಧಾನ್ಯಗಳ ಸರಬರಾಜು ಮಾಡುವುದು
 • ಸಂಘದ ಸದಸ್ಯರುಗಳಿಗೆ, ಚಾಲನೆಯಲ್ಲಿರುವ ಸಂಸ್ಕರಣಾ ಘಟಕಗಳಿಗೆ ಹಾಗೂ ಇತರೆ ಸಂಬಂಧಿತ ಚಟುವಟಿಕೆಗಳಿಗೆ ಸಾಲಗಳನ್ನು ಒದಗಿಸುವುದು

ಲ್ಯಾಂಪ್ಸ್ ಸಹಕಾರ ಸಂಘಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಇಂತಿದೆ

(ರೂ.ಲಕ್ಷಗಳಲ್ಲಿ )

ಕ್ರ.ಸಂ

ವಿವರಗಳು

2018-19

1

ಒಟ್ಟು ಲ್ಯಾಂಪ್ಸ್ ಸಹಕಾರ ಸಂಘಗಳು

23

2

ಲ್ಯಾಂಪ್ಸ್ ಸಹಕಾರ ಸಂಘಗಳ ಸದಸ್ಯರು

80444

3

ಪಾವತಿಸಿದ ಷೇರು ಬಂಡವಾಳ

628.86

4

ಲಾಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು ಲ್ಯಾಂಪ್ಸ್ ಸಹಕಾರ ಸಂಘಗಳು

19

5

ನಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು ಲ್ಯಾಂಪ್ಸ್ ಸಹಕಾರ ಸಂಘಗಳು

04

6

ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಲ್ಯಾಂಪ್ಸ್ ಸಹಕಾರ ಸಂಘಗಳಿಗೆ (ಲ್ಯಾಂಪ್ಸ್ ಮಹಾಮಂಡಳ ಸೇರಿದಂತೆ) 2018-19 ಅವಧಿಯಲ್ಲಿ ಮಂಜೂರಾದ ಒಟ್ಟು ಮೊಬಲಗು

370.00

Top

ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿ., ಮೈಸೂರು .

ಉದ್ದೇಶಗಳು/ ಚಟುವಟಿಕೆಗಳು :-

 • ಲ್ಯಾಂಪ್ಸ್ ಮಹಾಮಂಡಳದ ಕಾರ್ಯವ್ಯಾಪ್ತಿಯಲ್ಲಿ ಬರುವ, ಬುಡಕಟ್ಟು ಜನಾಂಗದವರ ಹಿತಾಸಕ್ತಯ ಉದ್ದೇಶದಿಂದ ಅವರನ್ನು ಸಂಘಟಿಸಿ, ಅಭಿವೃದ್ಧಿಯ ಯೋಜನೆ ರೂಪಿಸಿ, ನೈಸರ್ಗಿಕ ಉತ್ಪನ್ನಗಳ ಅಭಿವೃದ್ಧಿ ಮತ್ತು ಅದರ ವ್ಯಾಪಾರ ಯೋಜನೆಯನ್ನು ಸಾಂಪ್ರದಾಯಿಕ ವೈಜ್ಞಾನಿಕ ಹಾಗೂ ವಾಣಿಜ್ಯ ಉದ್ದೇಶಗಳ ಆಧಾರದಲ್ಲಿ ಅಭಿವೃದ್ಧಿಗೆ ಕ್ರಮವಹಿಸುವುದು.

 • ನೈಸರ್ಗಿಕ ಉತ್ಪನ್ನಗಳು ಅಥವಾ ಅವಲಂಬಿತ ಉತ್ಪನ್ನಗಳನ್ನು ಆಧರಿಸಿ ಸೂಕ್ತ ಆರ್ಥಿಕ ಯೋಜನೆಗಳ ರೂಪಿಸುವ ಮೂಲಕ ಬುಡಕಟ್ಟು ಜನಾಂಗದವರಿಗೆ ಹೆಚ್ಚಿನ ಗಳಿಕೆಯ ಮತ್ತು ದೊಡ್ಡದಾದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಖಚಿತಪಡಿಸಲು ಕ್ರಮಿಸುವುದು .

 • ಬುಡಕಟ್ಟು ಪ್ರದೇಶಗಳಲ್ಲಿ ಲಭ್ಯವಿರುವ ನೈಸರ್ಗಿಕ ಉತ್ಪನ್ನಗಳ ಅಂದರೆ ಕೃಷಿ ಮತ್ತು ಅರಣ್ಯ ಉತ್ಪನ್ನಗಳ ಸಂಪೂರ್ಣ ಬಳಕೆಯನ್ನು ಖಚಿತಪಡಿಸಿಕೊಂಡು, ಸಂಘಟಿತ ಶ್ರಮವಹಿಸಿ ಮಾರುಕಟ್ಟೆ ಸುಧಾರಿಸುವುದು .

 • ಬುಡಕಟ್ಟು ಜನಾಂಗದವರ ವಿವಿಧ ಪ್ರದೇಶಗಳಲ್ಲಿ, ಕಿರು ಅರಣ್ಯ ಉತ್ಪನ್ನಗಳನ್ನು ಗುರುತಿಸಿ, ಸಹಕಾರ ಮಾರುಕಟ್ಟೆ ವಿಭಾಗದಡಿ ತಂದು ಪ್ರತಿ ಸದಸ್ಯ ಸಂಘಗಳ ಕಿರು ಅರಣ್ಯ ಉತ್ಪನ್ನಗಳ ಕನಿಷ್ಠ ಬೆಲೆಗಳನ್ನು ಶಿಫಾರಸ್ಸು ಮಾಡುವುದು .

 • ಲ್ಯಾಂಪ್ಸ್ ಮಹಾಮಂಡಳವು ಕಿರು ಅರಣ್ಯ ಉತ್ಪನ್ನಗಳನ್ನು ಪಡೆಯಲು, ಸದಸ್ಯ ಸಂಘಗಳಿಗೆ ಹಣಕಾಸು ನೆರವು ವಿಸ್ತರಿಸುವುದು .

 • ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲು ಸದಸ್ಯ ಸಂಘಗಳಿಗೆ ಸಹಾಯವನ್ನು ಮಹಾಮಂಡಳವು ಒದಗಿಸುವುದು .

 • ಸದಸ್ಯ ಸಂಘಗಳ ಏಳಿಗೆಯ ಹಿತದೃಷ್ಟಿಯಿಂದ, ಅರಣ್ಯ ಇಲಾಖೆಯ ಜೊತೆಗೆ ಉತ್ತಮ ಹೊಂದಾಣಿಕೆಯೊಂದಿಗೆ ಮಹಾಮಂಡಲವು ಕಾರ್ಯ ನಿರ್ವಹಿಸುವುದು.

 • ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೆರವಿನೊಂದಿಗೆ ಲ್ಯಾಂಪ್ಸ್ ಮಹಾಮಂಡಳವು, ತರಬೇತಿ ಮತ್ತು ಕಾರ್ಯಗಾರ ಕಾರ್ಯಕ್ರಮಗಳನ್ನು ಸಂಘಟಿಸುವುದು Top

ಸದಸ್ಯತ್ವ

 1. 1) ವೈಯಕ್ತಿಕ ಸದಸ್ಯರು - ಶೂನ್ಯ -

 2. 2) ಸಾಂಸ್ಥಿಕ (ಪ್ರಾಥಮಿಕ ಸಂಘಗಳು) - 23 ಲ್ಯಾಂಪ್ಸ್ ಸಂಘಗಳು

ವ್ಯಾಪಾರ ವಹಿವಾಟು

2018-19ನೇ ಸಾಲಿನಲ್ಲಿ ಲ್ಯಾಂಪ್ಸ್ ಸಂಘಗಳು ರೂ. 305.12 ಲಕ್ಷ ಮೊತ್ತದ ಕಿರು ಅರಣ್ಯ ಉತ್ಪನ್ನಗಳ ವ್ಯಾಪಾರ ವಹಿವಾಟು ಮಾಡಿ ಒಟ್ಟಾರೆ ರೂ 783.39 ಲಕ್ಷ ಮೊತ್ತದ ವಹಿವಾಟು ಮಾಡಿರುತ್ತದೆ. .


ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳ ನಿ., :

ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯು ದಿನಾಂಕ: 15-03-1995 ರಂದು ಅಸ್ತಿತ್ವಕ್ಕೆ ಬಂದಿದ್ದು, ಈ ಕೆಳಕಂಡ ಪ್ರಮುಖ ಉದ್ದೇಶಗಳನ್ನು ಹೊಂದಿದೆ .

 • ಗ್ರಾಮೀಣ ನಿರುದ್ಯೋಗಿ ಯವಕ-ಯುವತಿಯರಿಗೆ ಉದ್ಯೋಗವಕಾಶವನ್ನು ಕಲ್ಪಿಸುವ ದಿಸೆಯಲ್ಲಿ ರಾಜ್ಯದ ವ್ಯಾಪ್ತಿಯಲ್ಲಿ ಪ್ರಾಥಮಿಕ ಕುಕ್ಕುಟ ಸಹಕಾರ ಸಂಘಗಳ ಸ್ಥಾಪನೆ ಹಾಗೂ ಅವುಗಳ ಬಲವರ್ಧನೆ
 • ಕೋಳಿ ರೋಗಗಳ ಪರಿವೀಕ್ಷಣೆ ಹಾಗೂ ನಿಯಂತ್ರಣ ಕೈಗೊಳ್ಳುವುದು.
 • ಗಿರಿರಾಜ ಕೋಳಿ ಮರಿಗಳ ಸಾಕಾಣಿಕೆ ಹಾಗೂ ಮಾರಾಟ .
 • ಕರ್ನಾಟಕ ಸರ್ಕಾರವು ಕೋಳಿ ಶೀತ ಜ್ವರ ಕಣ್ಗಾವಲಿಗಾಗಿ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ರಚಿಸಿದ್ದು, ಸಭೆ ಜರುಗಿಸುವುದರೊಂದಿಗೆ ಸಾರ್ವಜನಿಕರಿಗೆ ಅರಿವು ಹಾಗೂ ಮಾಹಿತಿ ನೀಡುವುದು.

ಪ್ರಸ್ತುತ 134 ಪ್ರಾಥಮಿಕ ಕುಕ್ಕುಟ ಸಹಕಾರ ಸಂಘಗಳು ಈ ಮಹಾಮಂಡಳದಲ್ಲಿ ಸದಸ್ಯತ್ವವನ್ನು ಪಡೆದಿರುತ್ತವೆ. ಪ್ರಸಕ್ತ ಸಾಲಿನಲ್ಲಿ ಯೋಜನೆ ಲೆಕ್ಕ ಶೀರ್ಷಿಕೆಯಡಿ ರೂ.350.00 ಲಕ್ಷ ಮಂಜೂರಾಗಿರುತ್ತದೆ.


Top

ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿ., ಬೆಂಗಳೂರು.

ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿ., ಈ ಸಂಸ್ಥೆಯು ದಿನಾಂಕ:25-11-1992 ರಲ್ಲಿ ನೋಂದಾಯಿಸಲ್ಪಟ್ಟಿದ್ದು, ರಾಜ್ಯ ಮಟ್ಟದ ಸಹಕಾರ ಸಂಸ್ಥೆಯಾಗಿರುತ್ತದೆ. ಇದರ ಮುಖ್ಯ ಉದ್ದೇಶಗಳು ಈ ಕೆಳಕಂಡಂತಿರುತ್ತವೆ.

 • ಜಿಲ್ಲಾ, ಬ್ಲಾಕ್ ಮತ್ತು ಪ್ರಾಥಮಿಕ ಹಂತದ ಮಹಿಳಾ ಸಂಘಗಳನ್ನು ಸಂಘಟಿಸುವುದು ಮತ್ತು ಅಭಿದ್ದಿ ಪಡಿಸುವುದು .

 • ಜಿಲ್ಲಾ ಮಟ್ಟದ ಮಹಿಳಾ ಸಹಕಾರ ಸಂಘಗಳ ಆರ್ಥಿಕ ಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಉತ್ತಮಪಡಿಸುವುದು.

 • ಮಹಿಳಾ ಸಹಕಾರ ಸಂಘಗಳ ಸದಸ್ಯರು ಉತ್ಪಾದಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು .

 • ಮಹಿಳಾ ಸಹಕಾರ ಸಂಘಗಳ ಚಟುವಟಿಕೆಗಳಿಗೆ ಪ್ರಚಾರ ನೀಡುವುದು.

 • ಸಭೆ, ಸಮ್ಮೇಳನ, ವಿಚಾರಗೋಷ್ಠಿಗಳನ್ನು ಕರೆದು ಮಹಿಳಾ ಸಹಕಾರ ಸಂಘಗಳ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ವೇದಿಕೆ ನಿರ್ಮಿಸುವುದು.

 • ಸಂಸ್ಥೆಯ ವತಿಯಿಂದ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ತೆರೆಯುವುದು.

ಸದಸ್ಯತ್ವ:

ಈ ಸಂಸ್ಥೆಯ ಸದಸ್ಯತ್ವವು ಎಲ್ಲಾ ಜಿಲ್ಲಾ ಮಟ್ಟದ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳಿಗೆ, ಮಹಿಳಾ ಸಹಕಾರ ಬ್ಯಾಂಕುಗಳಿಗೆ ಮತ್ತು ಇತರೆ ಮಹಿಳಾ ಸಹಕಾರ ಸಂಘಗಳಿಗೆ ತೆರೆದಿರುತ್ತವೆ. Top

ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕಾ ಮಹಾಮಂಡಳಿ, ಮೈಸೂರು

ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕಾ ಮಹಾಮಂಡಳಿಯು ದಿನಾಂಕ:02-10-1989 ರಲ್ಲಿ ರಾಜ್ಯ ಮಟ್ಟದ ಕಾರ್ಯವ್ಯಾಪ್ತಿ ಹೊಂದಿರುವ ಮಹಾ ಮಂಡಳಿಯಾಗಿ ನೋಂದಣಿಯಾಗಿದ್ದು 292 ಮೀನುಗಾರರ ಸಹಕಾರ ಸಂಘಗಳು ಸದಸ್ಯತ್ವವನ್ನು ಪಡೆದಿರುತ್ತವೆ.(out of which 22 SC, 5 ST and 27 women)

ನೀರು ಬಳಕೆದಾರರ ಸಹಕಾರ ಸಂಘಗಳು

ರಾಜ್ಯದಲ್ಲಿ 3273 ನೀರು ಬಳಕೆದಾರರ ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದ್ದು, ಇವುಗಳಲ್ಲಿ 2715 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. .

ಮಹಿಳಾ ಸಹಕಾರ ಸಂಘಗಳು

ರಾಜ್ಯದಲ್ಲಿ 5727 ಮಹಿಳಾ ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದೆ.

ಸಹಕಾರಿ ಆಸ್ಪತ್ರೆಗಳು

ರಾಜ್ಯದಲ್ಲಿ 15 ಸಹಕಾರಿ ಆಸ್ಪತ್ರೆಗಳು ನೋಂದಣಿಗೊಂಡಿದ್ದು, ಇವುಗಳಲ್ಲಿ 08 ಸಹಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘಗಳು

ರಾಜ್ಯದಲ್ಲಿ 4 ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘ ನಿ., ಹುಕ್ಕೇರಿ, ಇವುಗಳಲ್ಲಿ 2 ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಘವು 1969 ರಲ್ಲಿ ನೋಂದಣಿಗೊಂಡಿದೆ. ಪ್ರತಿಯೊಬ್ಬ ವಿದ್ಯುತ್ ಗ್ರಾಹಕನು ಸಂಘದ ಸದಸ್ಯನಾಗಿರುತ್ತಾನೆ. 31-03-2019 ರಲ್ಲಿದ್ದಂತೆ ಷೇರು ಬಂಡವಾಳವು ರೂ. 7.24 ಕೋಟಿಗಳಿದ್ದು ದುಡಿಯುವ ಬಂಡವಾಳ ರೂ.107.28 ಕೋಟಿಗಳಾಗಿವೆ. ದಿನಾಂಕ:31-03-2019 ರಲ್ಲಿದ್ದಂತೆ. ಇದರಿಂದ 113 ಗ್ರಾಮಗಳು,13 ಹ್ಯಾಮ್ಲೆಟ್ಸ್ .

ಸಾರಿಗೆ ಸಹಕಾರ ಸಂಘಗಳು:

ರಾಜ್ಯದಲ್ಲಿ 15 ಸಹಕಾರ ಸಾರಿಗೆ ಸಂಘಗಳು ನೋಂದಾಯಿಸಲಾಗಿದೆ. ಇವುಗಳಲ್ಲಿ 09 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಸಾರಿಗೆ ಸಹಕಾರ ಸಂಘ ನಿ., ಕೊಪ್ಪ ಈ ಸಂಘವು 1991 ರಲ್ಲಿ ನೋಂದಾವಣೆಗೊಂಡಿದ್ದು, 70 ಬಸ್ಸುಗಳನ್ನು ಹೊಂದಿದೆ. ಮತ್ತು 266 ವ್ಯಕ್ತಿಗಳು ಸಂಘಗಳ ಸದಸ್ಯರನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಮಾರ್ಗಗಳ ಶೇಕಡ 60 ರಷ್ಟನ್ನು ಈ ಸಹಕಾರ ಸಂಘವು ನಿರ್ವಹಿಸುತ್ತಿದೆ .

ಮೀನುಗಾರಿಕೆ ಸಹಕಾರ ಸಂಘಗಳು

ರಾಜ್ಯದಲ್ಲಿ 654 ಮೀನುಗಾರಿಕೆ ಸಹಕಾರ ಸಂಘಗಳು ನೋಂದಾಯಿಸಲಾಗಿದೆ. ಇವುಗಳಲ್ಲಿ 586 ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.

ಮರ ಬೆಳೆಸುವರರ ಸಹಕಾರ ಸಂಘಗಳು

ರಾಜ್ಯದಲ್ಲಿ 21 ಮರ ಬೆಳೆಸುವವರ ಸಹಕಾರ ಸಂಘಗಳು ನೋಂದಾಯಿಸಲಾಗಿದೆ. ಇವುಗಳಲ್ಲಿ 10 ಕೆಲಸ ನಿರ್ವಹಿಸುತ್ತಿವೆ. ಈ ಸಹಕಾರ ಸಂಘಗಳು ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿವೆ.

ಕಾರ್ಮಿಕ ಸಹಕಾರ ಸಂಘಗಳು

ರಾಜ್ಯದಲ್ಲಿ 102 ಗುತ್ತಿಗೆ ಕಾರ್ಮಿಕರ ಸಹಕಾರ ಸಂಘಗಳು ನೋಂದಾಯಿಸಲಾಗಿದೆ, ಇವುಗಳಲ್ಲಿ 49 ಕಾರ್ಮಿಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

Top

ಕ್ರೀಡಾ ಉತ್ತೇಜನೆ ಮತ್ತು ಅಭಿವೃದ್ಧಿ ಸಹಕಾರ ಸಂಘ, ಚಂದರಗಿ:

ಕ್ರೀಡೆಯನ್ನು ಪ್ರೋತ್ಸಾಹಿಸುವುದಕ್ಕಾಗಿ 1983 ರಲ್ಲಿ ಈ ಸಂಸ್ಥೆಯು ನೋಂದಾವಣೆಗೊಂಡಿದೆ, ಇದೊಂದು ರಾಜ್ಯ ಮಟ್ಟದ ಸಂಸ್ಥೆಯಾಗಿದೆ, ಇದು ವಸತಿ ಕ್ರೀಡಾ ಶಾಲೆಯನ್ನು ಹೊಂದಿದೆ. 773 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಸಂಸ್ಥೆಯು 6ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಶಾಲೆಯನ್ನು ನಡೆಸುತ್ತಿದೆ.

Top