ಸಹಕಾರ ಸಿಂಧು
ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ

ಗಿರವಿ ಮತ್ತು ಲೇವಾದೇವಿಗಾರರು    ||    ಚೀಟಿ ನಿಧಿಗಳು

 

ಕರ್ನಾಟಕ ಲೇವಾದೇವಿಗಾರರ ಮತ್ತು ಕರ್ನಾಟಕ ಗಿರವಿದಾರರ ಕಾಯ್ದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಕೆ ಎಂ ಆಶಾ ,
ಸ.ಸಂ.ಜಂಟಿ ನಿಬಂಧಕರು,
(ಕಾನೂನು ಕೋಶ
),
ದೂರವಾಣಿ ಸಂಖ್ಯೆ:080-22268436,
ಇ-ಮೇಲ್ : jrcs-legal-ka@nic.in

ಪುಂಡಲಿಕ್ ಎಲ್ ಸಾದುರೆ
ಸ. ಸಂ. ಸಹಾಯಕ ನಿಬಂಧಕರು(ಲೇವಾದೇವಿ
),
ದೂರವಾಣಿ ಸಂಖ್ಯೆ:080-22269636/37 Ext:223,
ಇ-ಮೇಲ್ : arcs-ml-ka@nic.in

ಹೆಚ್ ಸುನಂದ,
ಸ. ಸಂ. ಸಹಾಯಕ ನಿಬಂಧಕರು
(ಆರ್. ಎಸ್. ಆರ್
),
ದೂರವಾಣಿ ಸಂಖ್ಯೆ:080-22269636/37 Ext:223,
ಇ-ಮೇಲ್ : arcs-rsr-ka@nic.in

      ಕರ್ನಾಟಕಲೇವಾದೇವಿಗಾರರ ಕಾಯ್ದೆ 1961 ಮತ್ತು ಕರ್ನಾಟಕಗಿರವಿದಾರರ ಕಾಯ್ದೆ 1961 ಇದು ಲೇವಾದೇವಿಗಾರರ ಮತ್ತು ಗಿರವಿದಾರರ ವ್ಯವಹಾರವನ್ನು ನಿಯಂತ್ತಿಸುವ ದೃಷ್ಟಿಯಿಂದ 29-3-1962 ರಿಂದ ಜಾರಿಗೆ ಬಂದಿದೆ. ಕರ್ನಾಟಕಲೇವಾದೇವಿಗಾರರ ನಿಯಮಾವಳಿಗಳು 1965 ದಿನಾಂಕ:23-3-1965 ರಿಂದ ಜಾರಿಗೆ ಬಂದಿರುತ್ತದೆ ಹಾಗೆಯೇ ಕರ್ನಾಟಕಗಿರವಿದಾರರ ನಿಯಮಾವಳಿಗಳು 1966 ದಿನಾಂಕ:09-7-1966 ರಿಂದ ಜಾರಿಗೆ ಬಂದಿರುತ್ತದೆ. .

      ಯಾವುದೇ ವ್ಯಕ್ತಿಯು ಲೇವಾದೇವಿ ವ್ಯವಹಾರವನ್ನು ಮತ್ತು ಗಿರವಿ ವ್ಯವಹಾರವನ್ನು ನಡೆಸಲು ಉದ್ದೇಶಿಸಿದಲ್ಲಿ ಲೇವಾದೇವಿ ಕಾಯ್ದೆ 1961 ಪ್ರಕರಣ 6 ಮತ್ತು ಗಿರವಿದಾರರ ಕಾಯ್ದೆ 1961 ಪ್ರಕರಣ 4 ರಡಿಯಲ್ಲಿ ಕಡ್ಡಾಯವಾಗಿ ಪರವಾನಿಗಿಯನ್ನು ಪಡೆಯತಕ್ಕದ್ದು. ಸದರಿ ಪರವಾನಗಿಯನ್ನು ಪ್ರತಿ ಐದು ವರ್ಷಕೊಮ್ಮೆ ನವೀಕರಣಗೊಳಿಸತಕ್ಕದ್ದು. ಮತ್ತು ಲೇವಾದೇವಿ ವ್ಯವಹಾರವನ್ನು ನಡೆಸುವ ಸ್ಥಳ ಒಂದಕ್ಕಿಂತ ಹೆಚ್ಚಾಗಿರದಿದ್ದರೆರೂ.5000/- ಮತ್ತು ಪ್ರತಿ ಹೆಚ್ಚುವರಿ ಸ್ಥಳ ಒಂದಕ್ಕೆ ರೂ.2500/- ರಂತೆ ಶುಲ್ಕವನ್ನು ಮತ್ತು ಗಿರವಿ ವ್ಯವಹಾರಕ್ಕೆ ಪ್ರತಿ ಸ್ಥಳಕ್ಕೆ 7500/- ರಂತೆ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸತಕ್ಕದ್ದು. ಹಾಗೂ ಹೆಚ್ಚುವರಿ ಸ್ಥಳ ಒಂದಕ್ಕೆ ರೂ.2500/- ರಂತೆ ಶುಲ್ಕ ಪಾವತಿಸತಕ್ಕದ್ದು

  ಪರವಾನಗಿಯ ಮಂಜೂರಾತಿಗಾಗಿ ಪ್ರತಿಯೊಬ್ಬ ಲೇವಾದೇವಿದಾರನು, ಅಂಥ ಅರ್ಜಿಯನ್ನು ಸಲ್ಲಿಸುವಾಗ ವ್ಯವಹಾಕನುಗುಣವಾಗಿ ಈ ಕೆಳಗೆ ನಮೂದಿಸಿದ ಕೊಷ್ಠಕದಲ್ಲಿ ನಿರ್ದಿಷ್ಠಪಡಿಸಲಾದ ಮೊಬಲಗನ್ನು ನಿಯನಿಸಿದ ರೀತಿಯಲ್ಲಿ ಸರ್ಕಾರದ ಖಜಾನೆಯಲ್ಲಿ ಠೇವಣಿಯಾಗಿ ಇಡತಕ್ಕದ್ದು. :-

  •   ಒಂದು ವರ್ಷದಲ್ಲಿ ಒಂದು ಲಕ್ಷ ಬಂಡವಾಳ ತೊಡಗಿಸುವವರು ರೂ.5000/-

  •  ಒಂದು ವರ್ಷದಲ್ಲಿ ಒಂದು ಲಕ್ಷ ಮೇಲ್ಪಟ್ಟು ಐದು ಲಕ್ಷಕ್ಕಿಂತ ಕಡಿಮೆ ಬಂಡವಾಳ ತೊಡಗಿಸುವವರು ರೂ.10,000/-

  •  ಒಂದು ವರ್ಷದಲ್ಲಿಐದು ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟು ಮತ್ತು ಹತ್ತು ಲಕ್ಷಕ್ಕಿಂತ ಕಡಿಮೆ ಬಂಡವಾಳ ತೊಡಗಿಸುವವರು ರೂ.25,000/-

  •  ಒಂದು ವರ್ಷದಲ್ಲಿಹತ್ತು ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟು ಬಂಡವಾಳ ತೊಡಗಿಸುವವರು ರೂ.50,000/-

31-3-2017 ಕ್ಕೆ ಇದ್ದಂತೆ ಲೇವಾದೇವಿಗಾರರ ಮತ್ತು ಗಿರವಿದಾರರ ಮಾಹಿತಿ

(ರೂ.ಲಕ್ಷಗಳಲ್ಲಿ)
ಕ್ರ.ಸಂ
ವಿವರ
2016-17
1 ಪರವಾನಗಿ ಹೊಂದಿದ ಲೇವಾದೇವಿಗಾರರು
5380
2 ಪರವಾನಗಿ ಹೊಂದಿದ ಗಿರವಿದಾರರು
8734
3 ಹೊಸದಾಗಿ ಪರವಾನಗಿ ಪಡೆದವರ ಲೇವಾದೇವಿಗಾರರ ಸಂಖ್ಯೆ
508
4 ಹೊಸದಾಗಿ ಪರವಾನಗಿ ಪಡೆದವರ ಗಿರವಿದಾರರ ಸಂಖ್ಯೆ
368
5 ಲೇವಾದೇವಿಗಾರರಿಂದ ಮತ್ತು ಗಿರವಿದಾರರಿಂದ ಸರ್ಕಾರಕ್ಕೆ ಪಾವತಿಯಾದ ಶುಲ್ಕ
107.5
6 ಲೇವಾದೇವಿಗಾರರಿಂದ ಮತ್ತು ಗಿರವಿದಾರರಿಂದ ಸಂಗ್ರಹವಾದ ಭದ್ರತಾ ಠೇವಣಿ
155.5
7 ಲೇವಾದೇವಿಗಾರರಿಂದ ಮತ್ತು ಗಿರವಿದಾರರಿಂದ ಭದ್ರತಾ ಠೇವಣಿಯನ್ನು ವಾಪಸ್ಸು ಮಾಡಿದ ಮೊತ್ತ
30.12
Top