ಸಹಕಾರ ಸಿಂಧು
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರುಕಟ್ಟೆ     ||     ಸಂಸ್ಕರಣ     ||     ಗ್ರಾಹಕ     ||     ಹೈನುಗಾರಿಕೆ     ||     ವಸತಿ     || ಕೈಗಾರಿಕೆ

 

ಹೈನುಗಾರಿಕೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ವೈ.ಹೆಚ್. ಗೋಪಾಲಕೃಷ್ಣ
ಸ.ಸಂ.ಅಪರ ನಿಬಂಧಕರು (ಕೈಗಾರಿಕೆ & ಹೈನುಗಾರಿಕೆ),

ದೂರವಾಣಿ ಸಂಖ್ಯೆ :080-22355284,
ಇ-ಮೇಲ್ : addlrcs-indl-ka@nic.in

ಹೆಚ್. ರಮೇಶ್
ಸ. ಸಂ. ಸಹಾಯಕ ನಿಬಂಧಕರು (ಹೈನುಗಾರಿಕೆ),

ದೂರವಾಣಿ ಸಂಖ್ಯೆ :080-22269636/37 Ext : 212 ,
ಇ-ಮೇಲ್ : arcs-dairy-ka@nic.in

       ಸಹಕಾರ ವಲಯದಲ್ಲಿ ಶ್ವೇತ ಕ್ರಾಂತ್ರಿಯು ನಡೆದಿದ್ದು, ಇದು ರಾಜ್ಯಾದ್ಯಂತ ಹರಡಿರುತ್ತದೆ. ಪ್ರಾಥಮಿಕ ಹಾಲು ಉತ್ಪಾದನಾ ಸಹಕಾರ ಸಂಘಗಳು ಹಾಗೂ ರಾಜ್ಯ ಹಾಲು ಉತ್ಪಾದಕರ ಒಕ್ಕೂಟವು ಶಕ್ತಿಯುತ ಹಾಗೂ ದೂರ ದೃಷ್ಟಿಯಿಂದ ಈ ವಲಯವನ್ನು ಮುನ್ನಡೆಸುತ್ತಿದೆ.

       ರಾಜ್ಯ ಮಟ್ಟದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಗ್ರಾಮೀಣ ಮಟ್ಟದಲ್ಲಿ ಹಾಲು ಉತ್ಪಾದನಾ ಸಹಕಾರ ಸಂಘಗಳಾಗಿ 3 ಹಂತಗಳಲ್ಲಿ ಹಾಲು ಉತ್ಪಾದನಾ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಮಹಾಮಂಡಳವು ಗ್ರಾಮೀಣ ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆಯನ್ನು ನೀಡುವುದಲ್ಲದೆ ಪಟ್ಟಣ ಪ್ರದೇಶದ ಗ್ರಾಹಕರ ಬೇಡಿಕೆಗಳಾದ ಶುದ್ಧ ಆರೋಗ್ಯಕರ ಮತ್ತು ಗುಣಮಟ್ಟದ ಹಾಲು, ಬೆಣ್ಣೆ, ತುಪ್ಪ, ಪೇಡಾ, ಬರ್ಫಿ ಪನೀರ್, ಖೋವಾ, ಸುವಾಸನೆಯುಕ್ತ ರುಚಿಕರ ಹಾಲು ಇತ್ಯಾದಿಗಳನ್ನು ಒದಗಿಸುತ್ತಿದೆ.,

ಕರ್ನಾಟಕರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ.,.,

       ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ., ಇದು ಕರ್ನಾಟಕ ರಾಜ್ಯದ ಶೃಂಗ ಸಂಸ್ಥೆಯಾಗಿದ್ದು, ಇಡೀ ರಾಜ್ಯಾದ್ಯಂತ 3 ದಶಕಗಳಿಂದ 14 ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳ ಮೂಲಕ ಹಾಲು ಅಭಿವೃದ್ಧಿ ಚಟುವಟಿಕೆಗಳನ್ನು ಜಾರಿಗೊಳಿಸುತ್ತಾ ಗ್ರಾಮೀಣ ಹಾಲು ಉತ್ಪಾದಕರ ಜೀವನಕ್ಕೆ ಅಭ್ಯುದಯವನ್ನು ಒದಗಿಸಿದೆ..

       ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ., ಇದು ರಾಜ್ಯ ಮಟ್ಟದ ಸಂಸ್ಥೆಯಾಗಿದ್ದು, ಕೆ.ಎಂ.ಎಫ್ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಹಾಲು ಉತ್ಪಾದನೆಯ ಅಭಿವೃದ್ಧಿ ಚಟುವಟಿಕೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತದೆ..

       ಕೆ.ಎಂ.ಎಫ್. ಇದು ಹಾಲು ಉತ್ಪಾದಕರ ರೈತರು ಮತ್ತು ಗ್ರಾಹಕರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಇದು ಗ್ರಾಮೀಣ ಹಾಲು ಉತ್ಪಾದಕರಿಗೆ ನಿರಂತರ ಮಾರುಕಟ್ಟೆಯನ್ನು ಒದಗಿಸುವುದು ಹಾಗೂ ಗ್ರಾಹಕರ ಬೇಡಿಕೆಗೆ ಅನುಸಾರ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಹಾಲು ಉತ್ಪಾದನೆಯ ಅಭಿವೃದ್ಧಿಗೆ ಒತ್ತು ಕೊಡುವ ಉದ್ದೇಶದಿಂದ ಅವಶ್ಯ ತಾಂತ್ರಿಕ ಸೌಲಭ್ಯಗಳು ಜಾನುವಾರುಗಳಿಗೆ ಸಮತೂಕದ ಪಶು ಆಹಾರ, ಪಶುಪಾಲನಾ ನೆರವು ಎ . ಐ ಕೇಂದ್ರಗಳಿಗೆ ಎಲ್ .ಎನ್ 2 ಕಂಟೇನರ್ ಗಳು ಮತ್ತು ಚುಚ್ಚುಮದ್ದುಗಳನ್ನು ನಿರಂತರವಾಗಿ ಹಾಲು ಉತ್ಪಾದಕರಿಗೆ ಸರಬರಾಜು ಮಾಡಲಾಗುತ್ತಿದೆ. 2019 ರ ಮಾರ್ಚ್ ಅಂತ್ಯಕ್ಕೆ 14512 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 74.79ಲಕ್ಷ ಕೆ.ಜಿ. ಹಾಲು ಸಂಗ್ರಹಿಸಿ ಈ ಪೈಕಿ 34.87 ಲೀಟರ್ ಗಳಷ್ಟು ಹಾಲನ್ನು ಮಾರಾಟ ಮಾಡಲಾಗುತ್ತಿದೆ.

ಭೌತಿಕ ಮತ್ತು ಆರ್ಥಿಕ ಸಾಧನೆಗಳ ವಿವರ

ಕ್ರ.ಸಂ.

ವಿಷಯ

ದಿನಾಂಕ: 31-03-2019 ರ ಅಂತ್ಯಕ್ಕೆ ಇದ್ದಂತೆ

1

ನೋಂದಾಯಿತ ಜಿಲ್ಲಾ ಸಹಕಾರ ಸಂಘಗಳ ಸಂಖ್ಯೆ

16058

2

ಕಾರ್ಯನಿರತ ಜಿಲ್ಲಾ ಸಹಕಾರ ಸಂಘಗಳ ಸಂಖ್ಯೆ

14512

3

ಒಟ್ಟು ಸದಸ್ಯತ್ವ ನೋಂದಣಿ (ಲಕ್ಷಗಳಲ್ಲಿ)

24.75

ಮೇಲೆ ತಿಳಿಸಿರುವಂತೆ

ಪರಿಶಿಷ್ಟ ಜಾತಿ ಸದಸ್ಯರು

2.56

ಪರಿಶಿಷ್ಟ ಪಂಗಡದ ಸದಸ್ಯರು

1.44

ಮಹಿಳಾ ಸದಸ್ಯರು

8.88

ಸಣ್ಣ ರೈತ ಸದಸ್ಯರು

9.15

ಮಧ್ಯಮ ವರ್ಗದ ರೈತ ಸದಸ್ಯರು

7.22

ಭೂ ರಹಿತ ಕಾರ್ಮಿಕ ಸದಸ್ಯರು

4.37

ಇತರೆ

3.96

4

ಸರಾಸರಿ ಶೇಖರಣೆ (ಲಕ್ಷ ಕೆಜಿ/ಪ್ರತಿ ದಿನ)

74.79

5

ಉತ್ಪಾದಕರಿಗೆ ಪಾವತಿಸಿದ ಮೊತ್ತ (ಕೋಟಿಗಳಲ್ಲಿ/ಪ್ರತಿದಿನ)

18.70

6

ಸಗಟು ಮಾರಾಟದ ಸರಾಸರಿ (ಲಕ್ಷ ಲೀಟರ್/ಪ್ರತಿದಿನ)

34.87

7

ಬೆಂಗಳೂರು ನಗರದ ಮಾರಾಟ ಸರಾಸರಿ (ಲಕ್ಷ ಲೀಟರ್/ಪ್ರತಿದಿನ )

19.00

Top