7 ಕೃಷಿ ಪತ್ತು, ಸಹಕಾರ ಸಿಂಧು

ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ಕೃಷಿ ಪತ್ತು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಎ ಸಿ ದಿವಾಕರ್ , ಸ. ಸಂ. ಅಪರ ನಿಬಂಧಕರು (ಪತ್ತು )
ದೂರವಾಣಿ ಸಂಖ್ಯೆ : 080-22256146
ಇ-ಮೇಲ್ : addlrcs-credit-ka@nic.in

ಅಶ್ವಿನಿ ವೈ ಟಿ, ಸ. ಸಂ. ಸಹಾಯಕ ನಿಬಂಧಕರು
(ಪತ್ತು-1
)
ದೂರವಾಣಿ ಸಂಖ್ಯೆ :080-22269636/37 Ext : 215 ,
ಇ-ಮೇಲ್ : arcs-credit-ka@nic.in

ಸರಲಾ ಎಲ್ , ಸ. ಸಂ. ಸಹಾಯಕ ನಿಬಂಧಕರು    (ಪತ್ತು-2 )
ದೂರವಾಣಿ ಸಂಖ್ಯೆ :080-22269636/37 Ext : 215
ಇ-ಮೇಲ್ : arcs-credit-ka@nic.in

ವಾಸುದೇವಮೂರ್ತಿ , ಸ. ಸಂ. ಸಹಾಯಕ ನಿಬಂಧಕರು (ಎಲ್.ಡಿ.ಬಿ ) ದೂರವಾಣಿ ಸಂಖ್ಯೆ :080-22269636/37 Ext : 215
ಇ-ಮೇಲ್ : arcs-ldb-ka@nic.in

ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವ್ಯವಸ್ಥೆ

    ರಾಜ್ಯದ ಅರ್ಥ ವ್ಯವಸ್ಥೆ ವ್ಯವಸಾಯವನ್ನು ಅವಲಂಬಿಸಿರುತ್ತದೆ. ಶೇ.65 ರಷ್ಟು ಜನಸಂಖ್ಯೆ ಕೃಷಿ ಅವಲಂಬಿತರಾಗಿರುತ್ತಾರೆ. ಆರ್ಥಿಕ ಅಭಿವೃದ್ದಿಯಲ್ಲಿ ಸಾಲ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ದಿ ಹೊಂದುತ್ತಿರುವ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಸಾಲ ತನ್ನದೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಕೃಷಿ ಉತ್ಪಾದನೆಗೆ ಸಾಲ ವ್ಯವಸ್ಥೆ ಅತಿ ಮುಖ್ಯವಾಗಿರುತ್ತದೆ.

    • ಸಹಕಾರ ಚಳುವಳಿಯಲ್ಲಿ ಸಹಕಾರ ಸಾಲ ವ್ಯವಸ್ಥೆ ಅತ್ಯಂತ ಹಳೆಯದಾಗಿರುತ್ತದೆ ಹಾಗೂ ಇದರಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವ್ಯವಸ್ಥೆ ಇರುತ್ತದೆ.

    • ಅಲ್ಪಾವಧಿ ಸಾಲ ವ್ಯವಸ್ಥೆಯಲ್ಲಿ ಮೂರು ಹಂತಗಳಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಮಾಧ್ಯಮಿಕ ಹಂತದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಹಾಗೂ ಉತ್ತುಂಗ ಹಂತದಲ್ಲಿ ಸಹಕಾರ ಅಪೆಕ್ಸ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿವೆ.

    • ಅಲ್ಪಾವಧಿ ಸಾಲವು ಬೆಳೆ ಉತ್ಪಾದನೆ ಸಾಲವಾಗಿದ್ದು, ಮಧ್ಯಮಾವಧಿ ಸಾಲವು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಚಿಕ್ಕಪುಟ್ಟ ಅಭಿವೃದ್ದಿಗಳನ್ನು ಹೊಂದಿರುತ್ತವೆ. 4848 ಕ್ರಷಿ ಪತ್ತಿನ ಸಹಕಾರ ಕಾರ್ಯನಿರತವಾಗಿದ್ದು, ಈ ಎಲ್ಲಾ ಸಂಘಗಳು ರಾಜ್ಯದ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಅಧ್ಯರ್ಪಿತಗೊಂಡಿರುತ್ತವೆ. ಜಿಲ್ಲಾ ಬ್ಯಾಂಕುಗಳ 596 ಶಾಖೆಗಳು ಇವುಗಳ ಸಾಲ ವಿತರಣೆಗೆ ಶ್ರಮ ವಹಿಸುತ್ತಿವೆ. ಈ ಎಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಪುನರ್ಧನವನ್ನು ನಬಾರ್ಡ ಮತ್ತು ಅಪೆಕ್ಸ್ ಬ್ಯಾಂಕ್ ವತಿಯಿಂದ ಪಡೆಯುತ್ತಿವೆ. ಪ್ರತಿ ರೈತನ ಸರಾಸರಿ ಸಾಲ ರೂ. 37716 ಹಾಗೂ ಪ್ರತಿ ಕೃಷಿ ಪತ್ತಿನ ಸಹಕಾರ ಸಂಘದ ಸಾಲ ವಿತರಣೆ ಸರಾಸರಿ 168.75 ಲಕ್ಷಗಳಾಗಿರುತ್ತವೆ.

    • ಕಾಸ್ಕಾರ್ಡ ಬ್ಯಾಂಕ್ ರಾಜ್ಯಮಟ್ಟದಲ್ಲಿ ಹಾಗೂ ಪಿಕಾರ್ಡ ಬ್ಯಾಂಕುಗಳು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. 177 ಪಿಕಾರ್ಡ್ ಬ್ಯಾಂಕುಗಳು ದೀರ್ಘಾವಧಿ ಸಾಲ ವಿತರಣೆ ಮಾಡುತ್ತಿದ್ದು ಈ ಸಾಲ ಎರಡು ಹಂತದ್ದಾಗಿರುತ್ತದೆ.

2018-19ನೇ ಸಾಲಿನ ಯೋಜನೆ

ಸಾಲ ವಿತರಣೆ :

ದಿ:1-4-2018 ರಿಂದ ದಿ: 31-3-2019 ರವರೆಗಿನ ಕೃಷಿ ಸಾಲ ವಿತರಣೆ

                                                                                                                                                                       (ರೂ. ಕೋಟಿಳಲ್ಲಿ )

ಕ್ರ.ಸಂ

ವಿವರಗಳು

ಸಂಖ್ಯೆ

ಮೊತ್ತ

ಇದರಲ್ಲಿ ಹೊಸ ಸದಸ್ಯರು

ಇದರಲ್ಲಿ ಪ.ಜಾ/ ಪ.ಪಂ ಸದಸ್ಯರು

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

1

ಅಲ್ಪಾವಧಿ ಸಾಲ

1972694

10585.97

214030

1112.55

264145

1203.12

2

ಮದ್ಯಮಾವಧಿ ಸಾಲ

25522

530.78

19427

434.86

2481

46.67

3

ದೀರ್ಘಾವಧಿ ಸಾಲ

16735

233.77

10024

134.15

1519

20.60

 

  ಒಟ್ಟು

2014951

11350.52

243481

1681.56

268145

1270.39

Top


ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವಿತರಿಸಲಾದ ಅಲ್ಪಾವಧಿ ಸಾಲಗಳಲ್ಲಿ ವಿವಿಧ ಸಹಕಾರ ಸಂಸ್ಥೆಗಳ ಪಾಲು :

ಕ್ರ.ಸಂ

ಸಂಸ್ಥೆಯ ಹೆಸರು

ನಿಯೋಜಿತ ಮೊತ್ತ
(ರೂ.ಕೋಟಿಗಳಲ್ಲಿ) )

1

ನಬಾರ್ಡ

3500.00

2

ಅಪೆಕ್ಸ್ ಬ್ಯಾಂಕ್

1838.96

3

ಡಿಸಿಸಿ ಬ್ಯಾಂಕ್

5227.14

4

ಪಿ.ಎ.ಸಿ.ಎಸ್
(ಸ್ವಂತ ಬಂಡವಾಳ)

19.87

 

ಒಟ್ಟು

10585.97Top

ಕರ್ನಾಟಕ ರಾಜ್ಯದಲ್ಲಿ ಅಲ್ಪಾವಧಿ, ಮದ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಕಾರ್ಯ ನಿರ್ವಹಣೆ

     2018-19ನೇ ಸಾಲಿನಲ್ಲಿ ರಾಜ್ಯದಲ್ಲಿನ ಸಹಕಾರಿ ಸಾಲ ವ್ಯವಸ್ಥೆಯ ಮುಖಾಂತರ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ವಿತರಣೆಯು ಕ್ರಮವಾಗಿ ರೂ.10585.97ಕೋಟಿ, ರೂ.530.78ಕೋಟಿ ಮತ್ತು ರೂ.233.77ಕೋಟಿಗಳಾಗಿದ್ದು, ವಾರ್ಷಿಕ ಗುರಿಗೆ ಶೇ.84.56ರಷ್ಟು ಸಾಧನೆಯಾಗಿರುತ್ತದೆ.

       ರಾಜ್ಯದ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡುಗಳ ಮೂಲಕ ಕೃಷಿ ಸಾಲ ವಿತರಿಸುವ ಯೋಜನೆಯನ್ನು 1997-98ನೇ ಸಾಲಿನಿಂದ ಜಾರಿಗೆ ತರಲಾಗಿದ್ದು, ದಿ: 31-3-2019ರ ವರೆಗೆ ಒಟ್ಟಾರೆ 2167215 ಕಾರ್ಡುಗಳನ್ನು ವಿತರಿಸಲಾಗಿದೆ. ಈ ಪೈಕಿ 21,08,944 ಕಿಸಾನ್ ಕ್ರೆಡಿಟ್ ಕಾರ್ಡ್ದಾರರನ್ನು ವೈಯಕ್ತಿಕ ಅಪಘಾತ ವಿಮಾ ಯೋಜನೆಯಡಿಯಲ್ಲಿ ತರಲಾಗಿದೆ.

2016-17 ರಿಂದ 2018-19 ರವರೆಗೆ ಕೃಷಿ ಪತ್ತಿನ ಸಾಲದ ಪ್ರಗತಿಯ ವಿವರ
                                                                                                                                                                                             ( ರೂ. ಕೋಟಿಗಳಲ್ಲಿ )

ವರ್ಷ

 ಅಲ್ಪಾವಧಿ ಸಾಲ

ಮದ್ಯಮಾವಧಿ ಸಾಲ

 ದೀರ್ಘಾವಧಿ ಸಾಲ

 ಒಟ್ಟು ಸಾಲ

ಶೇ (%)

ಗುರಿTarget

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

2016-17

11000.00

10769.00

1000.00

692.78

600.00

440.41

12600.00

11902.19

94.46

2017-18

12000.00

10571.88

1000.00

848.73

500.00

198.27

13500.00

11618.88

86.06

2018-19

12000.00

10585.97

1000.00

530.78

423.26

233.77

13423.26

11350.52

84.56

Top

ಸಾಲ ವಸೂಲಾತಿ

          

                                                                                                                                                                                       ರೂ ಕೋಟಿಗಳಲ್ಲಿ

ವರ್ಷ

ಅಲ್ಪಾವಧಿ

ಮದ್ಯಮಾವಧಿ

ದೀರ್ಘಾವಧಿ

ತಗಾದೆ

ವಸೂಲಿ

ಬಾಕಿ

ಶೇ %

ತಗಾದೆ

ವಸೂಲಿ

ಬಾಕಿ

ಶೇ %

ತಗಾದೆ

ವಸೂಲಿ

ಬಾಕಿ

ಶೇ %

2016-17

9954.19

9368.72

585.47

94.12

427.23

316.71

110.52

74.13

638.07

258.41

379.66

40.49

2017-18

10594.25

9647.08

947.17

91.06

539.54

424.30

115.24

78.64

852.33

429.71

422.62

50.42

2018-19

11307.30

10281.47

1025.83

90.93

583.73

478.66

105.07

82.00

843.28

326.36

516.92

38.70
(tenetitive)

Top


I. ಶೂನ್ಯ ಮತ್ತು ಶೇ.3ರ ಬಡ್ಡಿ ದರದಲ್ಲಿ ವಿತರಿಸಿದ ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ.

      ರಾಜ್ಯದ ರೈತರಿಗೆ ಶೇಕಡ 3ರ ಬಡ್ಡಿ ದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು ಸರ್ಕಾರವು ದಿ:01-04-2008 ರಿಂದ ಅನುಷ್ಟಾನಗೊಳಿಸಿದೆ. 2011-12ನೇ ಸಾಲಿಗೆ ರೂ.3.00ಲಕ್ಷಗಳವರೆಗಿನ ಅಲ್ಪಾವಧಿ ಕೃಷಿ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ.1ಕ್ಕೆ ಇಳಿಸಲಾಗಿದೆ. 2012-13ನೇ ಸಾಲಿನಲ್ಲಿ ರೂ.1.00ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲಗಳನ್ನು “ಶೂನ್ಯ” ಬಡ್ಡಿ ದರದಲ್ಲಿ, ರೂ.1.00ಲಕ್ಷದಿಂದ ರೂ.3.00ಲಕ್ಷದವರೆಗಿನ ಸಂಪೂರ್ಣ ಸಾಲಗಳನ್ನು ಶೇ.1ರ ಬಡ್ಡಿ ದರದಲ್ಲಿ ವಿತರಿಸಲಾಗಿದೆ.

      2013-14ನೇ ಸಾಲಿನಲ್ಲಿ ರೂ.2.00ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲಗಳನ್ನು ಶೂನ್ಯ ಬಡ್ಡಿ ದರದಲ್ಲಿ, ರೂ.2.00ಲಕ್ಷದಿಂದ ರೂ.3.00ಲಕ್ಷದವರೆಗಿನ ಸಂಪೂರ್ಣ ಸಾಲಗಳನ್ನು ಶೇ.1ರ ಬಡ್ಡಿ ದರದಲ್ಲಿ ವಿತರಿಸಲಾಗಿದೆ. 2014-15ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಸಾಲಗಳನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಮಿತಿಯನ್ನು ರೂ.2.00ಲಕ್ಷದಿಂದ ರೂ.3.00ಲಕ್ಷಕ್ಕೆ ಹೆಚ್ಚಿಸಲಾಗಿದೆ ಹಾಗೂ ರೂ.10.00ಲಕ್ಷದ ವೆರಗಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ ವಿತರಿಸಲಾಗಿದೆ. ಸದರಿ ಯೋಜನೆಯನ್ನು 2015-16, 2016-17, 2017-18 ಮತ್ತು 2018-19ನೇ ಸಾಲಿನಲ್ಲಿಯೂ ಮುಂದುವರಿಸಲಾಗಿದೆ. ಈ ಸಂಬಂಧದಲ್ಲಿ ಸಹಕಾರ ಸಂಸ್ಥೆಗಳಿಗೆ ಸರ್ಕಾರವು ನಿಗದಿತ ಪ್ರಮಾಣದ ಬಡ್ಡಿ ಸಹಾಯಧನವನ್ನು ಭರಿಸಿಕೊಡುತ್ತಿದೆ.

      ಈ ಯೋಜನೆಯನ್ನು ಅನುಷ್ಠಾನಗೊಳಿಸಲು 2018-19ನೇ ಸಾಲಿನ ಆಯವ್ಯಯದಲ್ಲಿ ರೂ.96300.00ಲಕ್ಷಗಳ ಅನುದಾನವನ್ನು ಒದಗಿಸಿ ರೂ.77749.64ಲಕ್ಷಗಳ ಮೊತ್ತವನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ಪೂರ್ಣ ಮೊತ್ತವನ್ನು ವೆಚ್ಚ ಮಾಡಲಾಗಿದೆ. ಈ ಮೊತ್ತವನ್ನು ಸಂಬಂಧಪಟ್ಟ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಮೂಲಕ ಒಟ್ಟು 1989021 ರೈತ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಇದೇ ಅವಧಿಯಲ್ಲಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ವರ್ಗದ 121100 ಫಲಾನುಭವಿಗಳಿಗೆ ರೂ.3233.38ಲಕ್ಷ ಮೊತ್ತವನ್ನು ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ 105830 ಫಲಾನುಭವಿಗಳಿಗೆ ರೂ.2759.00ಲಕ್ಷ ಮೊತ್ತವನ್ನು ವೆಚ್ಚ ಮಾಡಲಾಗಿದೆ.

 

II. ಸಾಲ ಮನ್ನಾ -2017 ಯೋಜನೆ.

      ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರವು ಸ್ಪಂದಿಸಿದ್ದು, 2017-18ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳಲ್ಲಿ ರೂ.50,000.00ರವರೆಗಿನ ರೈತರ ಸಾಲವನ್ನು ಮನ್ನಾ ಮಾಡಲಾಗಿತ್ತು. ಈ ಯೋಜನೆಯ ಅನುಷ್ಟಾನಕ್ಕಾಗಿ 2017-18ರ ಆಯವ್ಯಯದಲ್ಲಿ ರೂ.3907.99ಕೋಟಿಗಳ ಮತ್ತು ಅಪೆಕ್ಸ್ ಬ್ಯಾಂಕಿನ ಸಂಪನ್ಮೂಲದಿಂದ ರೂ.1064.00ಕೋಟಿಗಳನ್ನು ಭರಿಸುವುದರೊಂದಿಗೆ ಒಟ್ಟು 12.80ಲಕ್ಷ ರೈತರಿಗೆ ರೂ.4971.99ಕೋಟಿಗಳ ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲಾಗಿದೆ. 2018-19ನೇ ಸಾಲಿನಲ್ಲಿ 8.23ಲಕ್ಷ ರೈತರಿಗೆ ರೂ.2740.21 ಕೋಟಿಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.

III. ಒಂದು ಕುಟುಂಬಕ್ಕೆ ಗರಿಷ್ಟ ರೂ.1.00ಲಕ್ಷದವರೆಗಿನ ಸಾಲ ಮನ್ನಾ -2018.

      2018-19ನೇ ಸಾಲಿನ ಆಯವ್ಯಯ ಭಾಷಣದ ಚರ್ಚೆಯ ಸಂಧರ್ಭದಲ್ಲಿ ಆಯವ್ಯಯದಲ್ಲಿ ಘೋಷಿಸಿದ ಸಾಲ ಮನ್ನಾ ಯೋಜನೆಯಲ್ಲಿ ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರಿಗೆ ಹೆಚ್ಚಿನ ಪ್ರಯೋಜನ ದೊರೆಯುವುದಿಲ್ಲ ಎಂದು ವಿಧಾನ ಮಂಡಳದ ಅನೇಕ ಮಾನ್ಯ ಸದಸ್ಯರುಗಳು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ದಿನಾಂಕ:10.7.2018 ರಂದು ಸಹಕಾರ ಸಂಘಗಳಲ್ಲಿ ರೈತರು ಅಲ್ಪಾವಧಿ ಬೆಳೆ ಸಾಲ ಪಡೆದು ದಿನಾಂಕ:10.7.2018ಕ್ಕೆ ಇರುವ ಹೊರಬಾಕಿಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಟ ರೂ.1.00ಲಕ್ಷದವರೆಗಿನ ಸಾಲದ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

      ಈ ಯೋಜನೆಯು ಸಾಲ ಮನ್ನಾ ರೈತರು ಸಾಲ ಮರುಪಾವತಿಸಲು ಬರುವ ಗಡುವು ದಿನಾಂಕಗಳಂದು ಜಾರಿಗೆ ಬರಲಿದ್ದು, ದಿ.10-7-2018ಕ್ಕೆ ಹೊರಬಾಕಿ ಚಾಲ್ತಿ ಇದ್ದಲ್ಲಿ ರೂ.1.00ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು ಗಡುವಿನ ದಿನಾಂಕದೊಳಗೆ (ಗರಿಷ್ಟ ದಿ.10-7-2019) ಮತ್ತು ದಿ.10-7-2018ಕ್ಕೆ ಹೊರಬಾಕಿ ಸುಸ್ತಿ ಇದ್ದಲ್ಲಿ ಸುಸ್ತಿ ಸಾಲದ ಮರುಪಾವತಿ ದಿನಾಂಕದವರೆಗಿನ ಸಂಪೂರ್ಣ ಬಡ್ಡಿಯನ್ನು ಹಾಗೂ ರೂ.1.00ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು ದಿನಾಂಕ: 31.03.2019ರೊಳಗೆ ಪಾವತಿಸಬೇಕಿರುತ್ತದೆ.ಈ ಯೋಜನೆಯು ರೂ.20,000ಗಳಿಗಿಂತ ಹೆಚ್ಚಿನ ವೇತನ/ಪಿಂಚಣಿ ಪಡೆಯುವ ನೌಕರರಿಗೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದಲ್ಲಿ ಅಂತಹವರಿಗೆ ಅನ್ವವಾಗುವುದಿಲ್ಲ. ಈ ಯೋಜನೆಯಲ್ಲಿ ಒಟ್ಟು 20.38ಲಕ್ಷ ರೈತರಿಗೆ ರೂ.9448.00ಕೋಟಿಗಳ ಸಾಲಮನ್ನಾ ಲಾಭ ದೊರೆಯಲಿದೆ ಎಂದು ಅಂದಾಜಿಸಲಾಗಿದ್ದು, 2018-19ನೇ ಸಾಲಿನಲ್ಲಿ 410375 ರೈತ ಫಲಾನುಭವಿಗಳಿಗೆ ರೂ.2600.00ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.

IV. ಸ್ವ-ಸಹಾಯ ವರ್ಗಗಳಿಗೆ ಸಾಲದ ಮೇಲಿನ ಬಡ್ಡಿ ಸಹಾಯಧನ.

      ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಗುಂಪುಗಳಿಗೆ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳ/ಡಿಸಿಸಿ ಬ್ಯಾಂಕುಗಳ ಮೂಲಕ ಶೇಕಡ 4ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯನ್ನು ದಿ:1-4-2007 ರಿಂದ ಜಾರಿಗೊಳಿಸಲಾಗಿದೆ. ಈ ಸಂಬಂಧದಲ್ಲಿ ಸಹಕಾರ ಸಂಸ್ಥೆಗಳಿಗೆ ಸರ್ಕಾರವು ನಿಗದಿತ ಪ್ರಮಾಣದ ಬಡ್ಡಿ ಸಹಾಯಧನವನ್ನು ಭರಿಸಿಕೊಡುತ್ತಿದೆ. 2017-18ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ/ಡಿಸಿಸಿ ಬ್ಯಾಂಕುಗಳ ವತಿಯಿಂದ ಸ್ವ-ಸಹಾಯ ಗುಂಪುಗಳಿಗೆ ಒದಗಿಸಿ 2018-19ರ ವರೆಗೆ ವಸೂಲಾಗುವ ಸಾಲಗಳ ಮೇಲೆ ಕೇಂದ್ರ ಸರ್ಕಾರದ ರಾಷ್ರೀಯ ರೂರಲ್ ಲೈವ್ಲಿಹುಡ್ ಯೋಜನೆ ಮತ್ತು ರಾಷ್ರ್ರೀಯ ಅರ್ಬನ್ ಲೈವ್ಲಿಹುಡ್ ಯೋಜನೆಗಳನ್ನು ಅಳವಡಿಸಿಕೊಂಡು ವ್ಯತ್ಯಾಸದ ಬಡ್ಡಿ ಸಹಾಯಧನವನ್ನು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರ ಮತ್ತು ಪುರುಷ ಸ್ವ-ಸಹಾಯ ಗುಂಪುಗಳಿಗೆ ಶೇ.4ರ ಬಡ್ಡಿ ದರ ಅನ್ವಯವಾಗುವಂತೆ ಕೇಂದ್ರ ಸಹಕಾರ ಬ್ಯಾಂಕುಗಳ ಮೂಲಕ ಸ್ವ-ಸಹಾಯ ಗುಂಪುಗಳಿಗೆ ನೀಡುವ ಸಾಲದ ಮೇಲೆ ರಾಜ್ಯ ಸರ್ಕಾರವು ಭರಿಸಿಕೊಡುತ್ತಿದೆ.

V. ಸ್ವಸಹಾಯ ಗುಂಪುಗಳ ರಚನೆ, ಹೊಸ ಸಾಲ ಹಾಗೂ ಮರುಸಾಲ ನೀಡಿಕೆ-ಗುರಿ ಮತ್ತು ಸಾಧನೆ.

      2015-16ನೇ ಸಾಲಿನಲ್ಲಿ ರೂ.6262.75.00ಲಕ್ಷಗಳ ಮತ್ತು 2016-17ನೇ ಸಾಲಿನಲ್ಲಿ ರೂ.2089.50ಲಕ್ಷಗಳ ಬಡ್ಡಿ ಸಹಾಯಧನವನ್ನು ಸ್ವ-ಸಹಾಯ ಗುಂಪುಗಳ ಪರವಾಗಿ ಡಿಸಿಸಿ/ ಪತ್ತಿನ ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಲಾಗಿದೆ. 2017-18ನೇ ಸಾಲಿನಿಂದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ ಸಾಲವನ್ನು ವಿತರಿಸಲಾಗುತ್ತಿದೆ. 2018-19 ರಲ್ಲಿ 13820 ಸ್ವಸಹಾಯ ಗುಂಪುಗಳಿಗೆ ರೂ.428.04ಕೋಟಿಗಳ ಸಾಲವನ್ನು ವಿತರಿಸಿದ್ದು, ರೂ.60.00ಕೋಟಿಗಳ ಬಡ್ಡಿ ಸಹಾಯಧನ ಬಿಡುಗಡೆ ಮಾಡಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಸದರಿ ಯೋಜನೆಯಡಿ ಆಯವ್ಯಯದಲ್ಲಿ ಒದಗಿಸಿದ ಅನುದಾನ

                                                                                                                                                       (ರೂ ಕೋಟಿಗಳಲ್ಲಿ )

ವರ್ಷ

ಗುಂಪುಗಳ ರಚನೆ

ಹೊಸ ಸಾಲ ನೀಡಿಕೆ

ಹಳೆ ಸಾಲಗಾರರಿಗೆ ನವೀಕರಣ

ಒಟ್ಟು ಸಾಲಗಳು

ಗುರಿ

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

2016-17

12000

11419

12000

130.00

8834

169.44

32000

630.00

24046

547.12

44000

760.00

32880

716.56

2017-18

12000

23862

9500

184.00

13689

418.67

26500

606.00

25083

682.75

36001

790.00

38772

1101.92

2018-19

16400

12889

9700

200.00

5528

171.22

30300

800.00

8292

256.82

40000

1000.00

13820

428.04

#

Top

VI. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕುಗಳ ಕಟ್ಟಡ ನಿರ್ಮಾಣ/ದುರಸ್ಥಿ ಯೋಜನೆ.

      ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕುಗಳು ಮತ್ತು ಇತರೆ ಸಹಕಾರ ಸಂಘಗಳು ಕಟ್ಟಡ ನಿರ್ಮಾಣ/ ದುರಸ್ಥಿ ಗೊಳಿಸಲು 2013-14ನೇ ಸಾಲಿನಲ್ಲಿ 26 ಸಹಕಾರ ಸಂಘಗಳಿಗೆ ರೂ.3.00ಕೋಟಿ, 2014-15ನೇ ಸಾಲಿನಲ್ಲಿ 96 ಸಹಕಾರ ಸಂಘಗಳಿಗೆ ರೂ.5.25ಕೋಟಿ, 2015-16ನೇ 407 ಸಹಕಾರ ಸಂಘಗಳಿಗೆ ರೂ.24.24ಕೋಟಿಗಳ ಆರ್ಥಿಕ ನೆರವನ್ನು ಸರ್ಕಾರವು ಬಿಡುಗಡೆಗೊಳಿಸಿರುತ್ತದೆ. 2016-17ನೇ ಸಾಲಿನಲ್ಲಿ 108 ಸಹಕಾರ ಸಂಘಗಳಿಗೆ ರೂ.10.00ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2017-18 ಸಾಲಿನಲ್ಲಿ 13 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೂ.1.25ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

VII. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಸ್ವಂತ ಗೋದಾಮು ಹೊಂದಲು ಸಹಾಯಧನ ಯೋಜನೆ.

      2015-16ನೇ ಸಾಲಿನಲ್ಲಿ ರಾಜ್ಯದಲ್ಲಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಸ್ವಂತ ಗೋದಾಮು ಕಟ್ಟಲು ಅನುಕೂಲವಾಗುವಂತೆ ಸರ್ಕಾರದ ಶೇ.30 ಹಾಗೂ ಸಹಕಾರ ಸಂಘಗಳಿಂದ ಶೇ.70ರಷ್ಟು ಕೊಡುಗೆಯೊಂದಿಗೆ ಈ ಯೋಜನೆಯನ್ನು ಅನುμÁ್ಠನಗೊಳಿಸಿದ್ದು, 115 ಪ್ಯಾಕ್ಸ್ ಗಳಲ್ಲಿ ಕನಿಷ್ಟ 100ಟನ್ ಸಾಮಥ್ರ್ಯದ ಗೋದಾಮುಗಳನ್ನು ನಿರ್ಮಿಸಲು ರೂ.5.00ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. 2016-17ನೇ ಸಾಲಿನಲ್ಲಿ 18 ಸಹಕಾರ ಸಂಘಗಳಿಗೆ ರೂ.80.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ

VIII. 2018-19ನೇ ಸಾಲಿಗೆ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ನಿ. ಧಾರವಾಡ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ. ವಿಜಯಪುರ ಬ್ಯಾಂಕುಗಳ ಶತಮಾನೋತ್ಸವ ಅಂಗವಾಗಿ ನಿರ್ಮಾಣ ಮಾಡುವ ಕಟ್ಟಡಕ್ಕೆ ತಲಾ ರೂ.2.50ಕೋಟಿ ಗಳಂತೆ ಸರ್ಕಾರ ಸಹಾಯಧನವನ್ನು ಮಂಜೂರು ಮಾಡಿದೆ.

2015-16 ಮತ್ತು 2016-17ನೇ ಸಾಲಿನಲ್ಲಿ ರಾಜ್ಯದಲ್ಲಿ ಉದ್ಭವಿಸಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು, ಸರ್ಕಾರವು ರೈತರಿಗೆ ಸಾಲದ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕೆಳಗಿನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

IX. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನಾ ಯೋಜನೆ.

      ಸದರಿ ಯೋಜನೆಯಡಿ ಸಹಕಾರ ಸಂಘಗಳಲ್ಲಿ ರೈತರು ಸಾಲ ಪಡೆದು ದಿ.30-9-2015 ಕ್ಕೆ ಸುಸ್ತಿಯಾಗಿರುವ ಎಲ್ಲಾ ಬಗೆಯ ಕೃಷಿ ಸಾಲಗಳ ಅಸಲನ್ನು ದಿ.31-03-2017ರೊಳಗೆ ಪಾವತಿಸಿದಲ್ಲಿ ಸದರಿ ಸಾಲದ ಮೇಲಿನ ಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗಿದ್ದು, ಈ ಯೋಜನೆಯಿಂದ ರೈತರಿಗೆ ಪುನಃ ಅಲ್ಪಾವಧಿ ಸಾಲವು ದೊರೆಯುವುದಿದ್ದು ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ಯೋಜನೆಯಡಿಯಲ್ಲಿ 2016-17ನೇ ಸಾಲಿನಲ್ಲಿ 72583 ರೈತರಿಗೆ ರೂ.124.69ಕೋಟಿಗಳ ಬಡ್ಡಿ ಮನ್ನಾ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2017-18ನೇ ಸಾಲಿನಲ್ಲಿ 28400 ರೈತರಿಗೆ ರೂ.5000.00ಲಕ್ಷಗಳ ಬಡ್ಡಿ ಮನ್ನಾ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

X. ಪಿಕಾರ್ಡ್ ಬ್ಯಾಂಕುಗಳ ಮೂಲಕ ರೈತರು ತೋಡು ಬಾವಿ ಉದ್ದೇಶಕ್ಕೆ ಪಡೆದ ಸಾಲ ಮನ್ನಾ ಯೋಜನೆ.

      ರಾಜ್ಯದಲ್ಲಿರುವ ಪಿಕಾರ್ಡ್ ಬ್ಯಾಂಕುಗಳ ಮೂಲಕ ಕೃಷಿ ಉದ್ದೇಶದ ತೋಡು ಬಾವಿಗಳಿಗೆ ನೀಡಲಾದ ಸಾಲಗಳಲ್ಲಿ, 1046 ವಿಫಲ ತೋಡು ಬಾವಿಗಳ ಸಾಲಗಳನ್ನು ಮನ್ನಾ ಮಾಡಿದ್ದು, ಈ ಉದ್ದೇಶಕ್ಕಾಗಿ ರೂ.263.64ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.

XI. ಕಾಯಕ ಯೋಜನೆ.

      ಸ್ವಸಹಾಯ ಗುಂಪುಗಳಲ್ಲಿನ ಸದಸ್ಯರಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯದೇ ಇರುವುದು, ಕೌಶಲ್ಯ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ತರಬೇತಿ ಮತ್ತು ಮಾಹಿತಿ ಇಲ್ಲದೇ ಇರುವುದರಿಂದ ಸ್ವಂತ ಉದ್ಯೋಗವನ್ನು ಕೈಗೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಬಿವೃದ್ಧಿ ಹೊಂದಲು ಸಾಧ್ಯವಾಗಿರುವುದಿಲ್ಲ. ಈ ಅಂತರವನ್ನು ಕಡಿಮೆ ಮಾಡಲು 2018-19ನೇ ಸಾಲಿನಲ್ಲಿ “ಕಾಯಕ” ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಡಿಸಿಸಿ ಬ್ಯಾಂಕುಗಳು/ಅರ್ಬನ್ ಬ್ಯಾಂಕುಗಳ/ಮಹಿಳಾ ಸಹಕಾರ ಬ್ಯಾಂಕುಗಳ ಮೂಲಕ ಸ್ವಸಹಾಯ ಗುಂಪುಗಳ ಸದಸ್ಯರು ಸ್ವಂತ ಉದ್ಯೋಗವನ್ನು ಕೈಗೊಳ್ಳಲು ರೂ.10.00 ಲಕ್ಷಗಳ ವರೆಗಿನ ಸಾಲವನ್ನು ಒದಗಿಸಲಾಗುತ್ತಿದೆ. ಇದರಲ್ಲಿ ಮೊದಲ ರೂ.5.00ಲಕ್ಷಗಳ ವರೆಗಿನ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಮತ್ತು ರೂ.5.00ಲಕ್ಷ ದಿಂದ ರೂ.10.00ಲಕ್ಷಗಳ ವರೆಗಿನ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ವಿತರಿಸಲಾಗುತ್ತಿದೆ. ಮಾರ್ಚ-2019ರ ಅಂತ್ಯಕ್ಕೆ ಸುಮಾರು 232 ಸ್ವಸಹಾಯ ಗುಂಪುಗಳಿಗೆ ರೂ.12.50ಕೋಟಿ ಸಾಲ ವಿತರಿಸಲಾಗಿದೆ.

XII. ಬಡವರ ಬಂಧು ಯೋಜನೆ.

      ಬೀದಿ ವ್ಯಾಪಾರಿಗಳು/ ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು “ಬಡವರ ಬಂಧು” ಯೋಜನೆಯನ್ನು 2018-19ನೇ ಸಾಲಿನಲ್ಲಿ ಘೋಷಿಸಲಾಗಿದೆ. ಈ ಯೋಜನೆಯಡಿ ಸಹಕಾರ ಬ್ಯಾಂಕುಗಳ ಮೂಲಕ ರಾಜ್ಯದ ಬೀದಿ ಬದಿ ವ್ಯಾಪಾರಿಗಳಿಗೆ ರೂ.10,000ರವರೆಗಿನ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗುತ್ತಿದೆ. ಇದರಿಂದಾಗಿ ಮೀಟರ್ಬಡ್ಡಿ ದಂದೆಕೋರರಿಂದ ಅಸಹಾಯಕ ಸಮುದಾಯವನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ. ಮಾರ್ಚ-2019ರ ಅಂತ್ಯಕ್ಕೆ ಸುಮಾರು 18344 ಬೀದಿ ವ್ಯಾಪಾರಿಗಳಿಗೆ ರೂ.10.57ಕೋಟಿ ಸಾಲ ವಿತರಿಸಲಾಗಿದೆ.

Top