ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ಪಟ್ಟಣ ಬ್ಯಾಂಕ್ ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಪ್ರಸಾದ್ ರೆಡ್ಡಿ ಸಿ ,
ಸಹಕಾರ ಸಂಘಗಳ ಜಂಟಿ ನಿಬಂಧಕರು (ಪಟ್ಟಣ ಬ್ಯಾಂಕುಗಳ ವಿಭಾಗ
) ,
ದೂರವಾಣಿ ಸಂಖ್ಯೆ: 080-22202677,
ಇ-ಮೇಲ್ : jrcs-ubc-ka@nic.in

ಎಂ ಪಿ ಮಂಜುನಾಥ್,
ಸಹಕಾರ ಸಂಘಗಳ ಸಹಾಯಕ ನಿಬಂಧಕರು (ಪಟ್ಟಣ ಬ್ಯಾಂಕುಗಳ ವಿಭಾಗ
),
ದೂರವಾಣಿ ಸಂಖ್ಯೆ :080-22269636/37 Ext : 214,
ಇ-ಮೇಲ್ : arcs-ubc-ka@nic.in

            ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಕೃಷಿಯೇತರ ಅಗತ್ಯವನ್ನೂ ಪೂರೈಸುವಲ್ಲಿ ಸಹಾಯಕವಾಗಿದೆ. ರಾಜ್ಯದಲ್ಲಿ ಪಟ್ಟಣ ಸಹಕಾರ ಬ್ಯಾಂಕಗಳು ಬ್ಯಾಂಕಿಂಗ್ ವಲಯದಲ್ಲಿ ಮಹತ್ತರ ಅಭಿವೃದ್ದಿ ಸಾಧಿಸಿ ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ. ಇದರ ಹೊರತಾಗಿ ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಮತ್ತು ನೌಕರರು ಪತ್ತಿನ ಸಹಕಾರ ಸಂಘಗಳು ಸಹ ಸಾಲ ನೀಡುವಲ್ಲಿ ಗಮನಾರ್ಹ ಪಾತ್ರ ವಹಿಸಿವೆ.

            ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು, ಗೃಹ ನಿರ್ಮಾಣ ಮತ್ತು ಇತರ ಬಳಕೆ ಕುರಿತು ಸಾಲ ನೀಡುತ್ತಿವೆ. ಈ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸ್ವಯಂ ಅಭಿವೃದ್ಧಿ ಹೊಂದುತ್ತಿದ್ದು ಸರ್ಕಾರದ ಹಣಕಾಸಿನ ನೆರವು ಪಡೆದಿರುವುದಿಲ್ಲ.

(ರೂ. ಕೋಟಿಗಳಲ್ಲಿ )

ಕ್ರ. ಸಂ

31-03-2019 ಕ್ಕೆ ಇದ್ದಂತೆ
ವಿವರ

ಪಟ್ಟಣ ಬ್ಯಾಂಕಗಳು

ಕೃಷಿಯೇತರ ಸಹಕಾರ ಸಂಘಗಳು

1

ನೋಂದಾಯಿತ ಪಟ್ಟಣ ಬ್ಯಾಂಕಗಳು / ಕೃಷಿಯೇತರ ಸಹಕಾರ ಸಂಘಗಳ ಸಂಖ್ಯೆ

306

4505

2

ಸಮಾನೆ

40

325

3

ಸ್ಥಗಿತ

-

192

4

ಕಾರ್ಯ ನಿರ್ವಹಿಸುತ್ತಿರುವ

266

3994

5

ಶಾಖೆಗಳು

1070

1435

6

ಸದಸ್ಯತ್ವ

3748076(ಲಕ್ಷಗಳಲ್ಲಿ)

4909455(ಲಕ್ಷಗಳಲ್ಲಿ)

7

ಷೇರು ಬಂಡವಾಳ

1388.68

7812.77

8

ಠೇವಣಿ

39393.64

114799.76

9

ದುಡಿಯುವ ಬಂಡವಾಳ

64709.27

     222482.82

10

ಸಾಲ & ಮುಂಗಡಗಳು

24311.34

-

11

ನಿವ್ವಳ ಲಾಭ

424.68

6064.92

12

ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ / ಸಂಘಗಳು

233

3083

13

ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ / ಸಂಘಗಳು

33

-

14

ಮಹಿಳಾ ಬ್ಯಾಂಕ್ / ಸಂಘಗಳು

24

-

14

ನೌಕರರ ಬ್ಯಾಂಕ್ / ಸಂಘಗಳು

-

-

 • ಮಹಿಳಾ ಪಟ್ಟಣ ಸಹಕಾರಿ ಬ್ಯಾಂಕಗಳು Top

  ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ, ಮಹಿಳೆಯರಿಗೆ ಪ್ರತ್ಯೇಕವಾಗಿ 24 ಬ್ಯಾಂಕುಗಳು ಇದ್ದು, ಮಹಿಳಾ ಸಹಕಾರಿ ಬ್ಯಾಂಕುಗಳ ಸಂಘಟನೆ ಮತ್ತು ಅಭಿವೃದ್ಧಿಯಲ್ಲಿ ದೇಶದ ಎರಡನೇ ಸ್ಥಾನವನ್ನು ಪಡೆದಿರುತ್ತದೆ.

  ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಲಿ., ಬೆಂಗಳೂರು.

  ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ 1965 ರ ನೋಂದಾಯಿಸಲ್ಪಟ್ಟಿದೆ. ಪ್ರಾಥಮಿಕ ಪಟ್ಟಣ ಬ್ಯಾಂಕುಗಳ ಇದರ ಸದಸ್ಯರಾಗಿರುತ್ತಾರೆ..

  ಮುಖ್ಯ ಉದ್ದೇಶಗಳು :

  • ಬ್ಯಾಂಕಿಂಗ್ ಚಟುವಟಿಕೆಯಲ್ಲಿ ಏಕರೂಪತೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಮತ್ತು ಭಾರತದ ರಿಸರ್ವ್ ಬ್ಯಾಂಕ್ ಗಳೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳನ್ನು ಪ್ರತಿನಿಧಿಸುತ್ತಿದೆ. .

  • ಪಟ್ಟಣ ಸಹಕಾರಿ ಬ್ಯಾಂಕ್ ಗಳ ಅಭಿವೃದ್ಧಿ ಮತ್ತು ಬ್ಯಾಂಕುಗಳ ಆಸಕ್ತಿಯನ್ನು ಕಾಪಾಡುವುದು.

  • ಈ ಬ್ಯಾಂಕುಗಳ ತಾಂತ್ರಿಕ ಮತ್ತು ಪ್ರಾಯೋಗಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಸಾಮಾನ್ಯ ವೇದಿಕೆ ಒದಗಿಸುವುದು

  • ಕರ್ನಾಟಕ ಸಹಕಾರ ಅಧಿನಿಯಮ & ನಿಯಮಗಳು , RBI ನಿಬಂಧನೆಗಳು, ಬ್ಯಾಂಕಿಂಗ್ ನಿರ್ವಹಣೆ ಮೈತ್ರಿ ವಿಷಯಗಳಿಗೆ ಸಂಬಂಧಿಸಿದಂತೆ ಸದಸ್ಯರು, ಪದಾಧಿಕಾರಿಗಳು ಮತ್ತು ಈ ಬ್ಯಾಂಕುಗಳ ನೌಕರರಿಗೆ ತರಬೇತಿ ನೀಡವುದು.

  • ಇದರ ಹೊರತಾಗಿ ಮಹಾಮಂಡಳವು, ಬ್ಯಾಂಕ್ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಾಶನಗೊಳಿಸಿತ್ತಿದ್ದು, ನ್ಯಾಯ ಬೆಲೆಯಲ್ಲಿ ಅವುಗಳನ್ನು ಮಾರಾಟ ಮತ್ತು ವಿತರಿಸಲು ಆಸಕ್ತಿ ಹೊಂದಿದೆ.

  Top