ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ವಸತಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಕೆ ಎಸ್ ನವೀನ್
ಸ.ಸಂ.ಅಪರ ನಿಬಂಧಕರು
(ವಸತಿ &ಇತರೆ
),
ದೂರವಾಣಿ ಸಂಖ್ಯೆ :080-22261873 ,
ಇ-ಮೇಲ್ : addlrcs-im-ka@nic.in

ಅಜ್ಮ್ ತ್ ಉಲ್ಲಾ ಖಾನ್
ಸ.ಸಂ. ಸಹಾಯಕ ನಿಬಂಧಕರು (ವಸತಿ
),
ದೂರವಾಣಿ ಸಂಖ್ಯೆ :080-22269636/37 Ext : 220,
ಇ-ಮೇಲ್ : rcs-hsg-ka@nic.in

ನಮ್ಮ ರಾಜ್ಯದಲ್ಲಿನ ಗೃಹ ನಿರ್ಮಾಣ ಸಹಕಾರ ಸಂಘಗಳು ಸಂಖ್ಯೆಗಳಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿರುತ್ತಾರೆ. ಇದುವರೆವಿಗೂ ಗೃಹ ನಿರ್ಮಾಣ ಸಹಕಾರ ಸಂಘಗಳು ರಾಜ್ಯದ ವಿವಿಧ ಭಾಗಗಳಲ್ಲಿ ಎಕರೆ ಗಟ್ಟಲೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು ಮತ್ತು ತತ್ಪರಿಣಾಮವಾಗಿ ತಮ್ಮ ಸದಸ್ಯರುಗಳಿಗೆ ನಿವೇಶನಗಳನ್ನು ಹಂಚಲು ಸಮರ್ಥನಿಯರಾಗಿರುತ್ತವೆ.

ಕ್ರ.ಸಂ .
ವಿವರ
2018-19
1 ರಾಜ್ಯದಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘಗಳ ಸಂಖ್ಯೆ
1,775
ಕಾರ್ಯನಿರತ
1,312
  ಸ್ಥಗಿತ
124
  ಸಮಾಪನೆ
339
2 ಸದರಿ ಸಂಘಗಳಲ್ಲಿರುವ ಒಟ್ಟು ಸದಸ್ಯತ್ವ ಸಂಖ್ಯೆ
10,29,462
3 ಈ ಪೈಕಿ ಪರಿಶಿಷ್ಟ ಜಾತಿ ಸದಸ್ಯರು/ಪರಿಶಿಷ್ಟ ಪಂಗಡದ ಸದಸ್ಯರು
90,568
4 ಷೇರು ಬಂಡವಾಳ (ರೂ. ಲಕ್ಷಗಳಲ್ಲಿ )
ಅ ) ಸದಸ್ಯರಿಂದ

1,82,745.26

ಆ ) ಸರ್ಕಾರದಿಂದ

9.74

5 ಭೂಸ್ವಾಧೀನಪಡಿಸಿಕೊಂಡಿರುವುದು in  ( ಎಕರೆಗಳಲ್ಲಿ )

22,616.19

6 ಸಂಘಗಳು ರಚಿಸಿರುವ ಒಟ್ಟು ನಿವೇಶನಗಳು
3,12,444
7 ಸದಸ್ಯರಿಗೆ ಹಂಚಿಕೆ ಮಾಡಿರುವ ನಿವೇಶನಗಳ ಸಂಖ್ಯೆ
2,96,299
ಈ ಪೈಕಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರಿಗೆ ಹಂಚಿಕೆ ಮಾಡಿರುವುದು
32,328

ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿ .,

ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿ., ಬೆಂಗಳೂರು 1950ರಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ. ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳವು 1950ರಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ. ಸದರಿ ಮಹಾಮಂಡಳವು ಮನೆಗಳನ್ನು ನಿರ್ಮಿಸಲು, ಖರೀದಿಸಲು, ವಿಸ್ತರಿಸಲು ಹಾಗೂ ಬಡಾವಣೆ ನಿರ್ಮಾಣಕ್ಕಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಸಾಲವನ್ನು ಒದಗಿಸುತ್ತಿದೆ.

2017-18ನೇ ಸಾಲಿನ ಆಖೈರಿಗೆ ರೂ.517.55ಲಕ್ಷ ಗಳ ಷೇರು ಬಂಡವಾಳವಿದ್ದು, ವರದಿಯ ಸಾಲಿನಲ್ಲಿ ವಸತಿ ಮಹಾಮಂಡಲಕ್ಕೆ ರೂ.26.85 ಲಕ್ಷ ಷೇರು ಮೊಬಲಗು ಸಂಗ್ರಹಣೆಯಾಗಿದ್ದು, ಸಂಘಗಳಿಗೆ ಸಾಲ ತೀರುವಳಿಯಾಗುವ ಸಂದರ್ಭದಲ್ಲಿ ಒಟ್ಟು ರೂ.53.36 ಲಕ್ಷ ಗಳನ್ನು ವಾಪಸ್ಸು ಮಾಡಲಾಗಿದೆ. 2018-19ನೇ ಸಾಲಿನಲ್ಲಿ ಸದಸ್ಯ ಸಂಘಗಳಿಂದ ಮತ್ತು ಬಿಡಿ ಸಾಲಗಾರರಿಂದ ಒಟ್ಟು ರೂ.491.01 ಲಕ್ಷ ಗಳ ಷೇರು ಬಂಡವಾಳ ಇರುತ್ತದೆ. ವರದಿಯ ಸಾಲಿನಲ್ಲಿ ರೂ.1,13,01,614.00ಗಳ ಕಾದಿರಿಸಿದ ನಿಧಿ ಠೇವಣಿ ಹಾಗೂ ಅವಧಿ ಠೇವಣಿ ರೂ.6,14,81,805.32ಗಳನ್ನು ಸಂಗ್ರಹಿಸಲಾಗಿದೆ.

ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ 2018-19ನೇ ಸಾಲಿನಲ್ಲಿ 70 ಪ್ರಕರಣಗಳಲ್ಲಿ ರೂ.508.30ಲಕ್ಷ ಗಳ ಸಾಲವನ್ನು ಮಂಜೂರು ಮಾಡಿದೆ. ಇದರಲ್ಲಿ ಪ್ರಾಥಮಿಕ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಗೃಹ ನಿರ್ಮಾಣಕ್ಕೆ 41 ಪ್ರಕರಣಗಳಲ್ಲಿ ರೂ.290.00ಲಕ್ಷಗಳು, ಬಡಾವಣೆ /ಅಭಿವೃದ್ಧಿ ಸಾಲ 16 ಪ್ರಕರಣಗಳಲ್ಲಿ ರೂ.112.10ಲಕ್ಷಗಳು ಹಾಗೂ ನಿವೇಶನ ಖರೀದಿಗೆ 7 ಪ್ರಕರಣಗಳಲ್ಲಿ ರೂ.47.30ಲಕ್ಷಗಳನ್ನು ಮಂಜೂರು ಮಾಡಿದೆ. ನೇರ ಸಾಲಗಾರರಿಗೆ ಒಟ್ಟು 6 ಪ್ರಕರಣಗಳಲ್ಲಿ ರೂ.58.90ಲಕ್ಷಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಗೃಹ ನಿರ್ಮಾಣಕ್ಕೆ 3 ಪ್ರಕರಣಗಳಲ್ಲಿ ರೂ38.50ಲಕ್ಷಗಳು, ಬಡಾವಣೆ /ಅಭಿವೃದ್ಧಿ ಸಾಲ 1 ಪ್ರಕರಣಗಳಲ್ಲಿ ರೂ.7.50ಲಕ್ಷಗಳು ಹಾಗೂ ನಿವೇಶನ ಖರೀದಿಗೆ 2 ಪ್ರಕರಣಗಳಲ್ಲಿ ರೂ.12.90ಲಕ್ಷಗಳನ್ನು ಮಂಜೂರು ಮಾಡಲಾಗಿದೆ.

ಮಹಾಮಂಡಲದ ಸುಸ್ತಿ ಸಾಲದ ಪ್ರಮಾಣ ಈ ಹಿಂದೆ ಹೆಚ್ಚಿದ್ದು ಈ ದಿಶೆಯಲ್ಲಿ ವಸೂಲಾತಿಗೆ ಆದ್ಯತೆ ನೀಡಿ ವಸೂಲಾತಿಯಲ್ಲಿ ಗಣನೀಯ ಸಾಧನೆ ಮಾಡಲಾಗಿದೆ. ಸದರಿ ಸಾಲಿನಲ್ಲಿ ರೂ.1527.90ಲಕ್ಷಗಳ ಸಾಲ ವಸೂಲಿ ಮಾಡಲಾಗಿದೆ. ತಗಾದೆಗೆ ವಸೂಲಾತಿ ಪ್ರಮಾಣ ಶೇಕಡ 80.35 ರಷ್ಟಿರುತ್ತದೆ.

Top