ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

 

ಯೋಜನಾ ಕಾರ್ಯಕ್ರಮಗಳು

      ಯೋಜನಾ ಕಾರ್ಯಕ್ರಮಗಳ ಹೆಸರು, ಆರ್ಥಿಕ ಸಹಾಯದ ವಿಧ, ಯೋಜನೆಯ ಉದ್ದೇಶ ಹಾಗೂ ಫಲಶೃತಿಯ ವಿವರಗಳು ಈ ಕೆಳಕಂಡಂತೆ ಇರುತ್ತವೆ.

ಕ್ರ .ಸಂ
ಯೋಜನೆ
1
ನಿರ್ದೇಶನ ಮತ್ತು ಆಡಳಿತ-ಆಧುನೀಕರಣ
2
ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ
3
ಗಿರಿಜನ ಉಪಯೋಜನೆ- ಲ್ಯಾಂಪ್ಸ್ ಸಂಯುಕ್ತ ಸಂಘಗಳಿಗೆ ಮಾರುಕಟ್ಟೆ ಮೂಲಭೂತ ಸೌಕರ್ಯಗಳು
4
ಯಶಸ್ವಿನಿ
5
ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಹಣಕಾಸು ಸಹಾಯ
6
ಸಾಲ ಮನ್ನಾ
7
ಸ್ವಸಹಾಯ ವರ್ಗಗಳಿಗೆ ಸಾಲಗಳ ಮೇಲಣ ಬಡ್ಡಿ ಸಹಾಯಧನ
8
ವಿವಿಧ ಸಹಕಾರ ಸಂಸ್ಥೆಗಳಲ್ಲಿ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರನ್ನು ಸದಸ್ಯರನ್ನಾಗಿ ನೋಂದಾಯಿಸುವ ಬಗ್ಗೆ ಸಹಾಯಧನ
9
ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಉನ್ನತೀಕರಣ
10
ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ಸಾಲ
11
ಸ್ವಸಹಾಯ ಗುಂಪುಗಳಿಗೆ ಗಣಕಯಂತ್ರ ಒದಗಿಸಿ ಗಣೀಕಿಕರಣಗೊಳಿಸಲು ಹಾಗೂ ಪ್ಯಾಕ್ಸ್ ಗಳಿಗೆ ತಂತ್ರಾಂಶ ಒದಗಿಸಲು ಸರ್ಕಾರದ ಸಹಾಯಧನ
12
ಸಹಕಾರಿ ಚುನಾವಣಾ ಪ್ರಾಧಿಕಾರ ..
13
ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ.
14
ಕೆ.ಸಿ.ಸಿ ಬ್ಯಾಂಕ್ ಧಾರವಾಡ ಮತ್ತು ಡಿ.ಸಿ.ಸಿ. ಬ್ಯಾಂಕ್ ವಿಜಯಪುರ ಬ್ಯಾಂಕ್ ಗಳಿಗೆ ಅನುದಾನ

1. ನಿರ್ದೇಶನ ಮತ್ತು ಆಡಳಿತ-125-ಆಧುನೀಕರಣ :

ಆಯವ್ಯಯ ಅವಕಾಶ:             ರೂ.20.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:     ಸಹಾಯಧನ

ಯೋಜನೆಯ ಉದ್ದೇಶ:

     ಇಲಾಖೆಯ ಕಛೇರಿಗಳ ಆಧುನೀಕರಣ, ತಂತ್ರಾಂಶ ಅಭಿವೃದ್ಧಿ ಗಣಕೀಕರಣ, ಕಡತಗಳಅಂಕೀಕರಣಕ್ಕೆ ಸಂಬಂಧಿಸಿದಂತೆ ಸಹಾಯಧನ ನೀಡುವುದು. ಕಛೇರಿಗಳಿಗೆ ಪೋಟೋಕಾಫಿಯರ್, ಗಣಕಯಂತ್ರ, ಫ್ಯಾಕ್ಷ್ ಯಂತ್ರಗಳ ಖರೀದಿ ಮಾಡುವುದು.

ಅಂದಾಜು ಫಲಿತಾಂಶ :

   ಸಂಪೂರ್ಣ ಗಣಕೀಕೃತ ಕಛೇರಿಗಳ ಮೂಲಕ ತ್ವರಿತ , ಪರಿಣಾಮಕಾರಿಯಾದ ಆಡಳಿತವನ್ನು ನೀಡಲು ಹಾಗೂ ಸಿಬ್ಬಂದಿಯು ಕಾರ್ಯ ನಿಪುಣತೆಯನ್ನು ಹೆಚ್ಚಿಸಲು ಅನುಕೂಲಗಾಗುತ್ತದೆ.   

2. ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ – ಮತ್ತು “ ಪಶು ಭಾಗ್ಯ” -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲTop

          ಆಯವ್ಯಯ ಅವಕಾಶ:             ರೂ. 96300.00/- ಲಕ್ಷಗಳು
          ಆರ್ಥಿಕ ಸಹಾಯದ ವಿಧ:     ಸಹಾಯಧನ

ಯೋಜನೆಯ ಉದ್ದೇಶ:

      ಅಲ್ಪಾವಧಿ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಶೇಕಡ ಶೂನ್ಯಕ್ಕೆ ಇಳಿಸುವುದು ಹಾಗೂ ಸರ್ಕಾರದ ಬದ್ಧತೆಯಂತೆ ಸಹಕಾರ ಸಂಘಗಳು ವಿತರಿಸಿರುವ ಸಾಲಗಳ ಮೇಲೆ ಬಡ್ಡಿ ಸಹಾಯಧನವನ್ನು ನೀಡುವುದು.

ಅಂದಾಜು ಫಲಿತಾಂಶ:

      ಕೃಷಿ ಸಾಲದ ವ್ಯವಸ್ಥೆಯು ಬಲಗೊಳಿಸಿ , ರೈತರಿಗೆ ಕೃಷಿ ಸಾಲವು ಸುಲಭ ದರದಲ್ಲಿ ದೊರೆಯುವಂತೆ ಮಾಡುವುದು.

 

3. ಗಿರಿಜನ ಉಪಯೋಜನೆ- ಲ್ಯಾಂಪ್ಸ್ ಸಂಯುಕ್ತ ಸಂಘಗಳಿಗೆ ಮಾರುಕಟ್ಟೆ ಮೂಲ ಸೌಕರ್ಯಗಳ ಸ್ಥಾಪನೆ.

ಆಯವ್ಯಯ ಅವಕಾಶ:             ರೂ.70.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:     ಸಹಾಯಧನ

ಯೋಜನೆಯ ಉದ್ದೇಶ:

      ಲ್ಯಾಂಪ್ಸ್ ಸಹಕಾರ ಮಹಾಮಂಡಳ ಹಾಗೂ ಲ್ಯಾಂಪ್ಸ್ ಸಂಘಗಳಿಗೆ ಮೂಲಭೂತ ಸೌಕರ್ಯಗಳಾದ ಕಂಪ್ಯೂಟರ್ ಗಳು, ಫ್ಯಾಕ್ಸ್, ಟೆಲಿಪೋನ್ ಗಳನ್ನು ಒದಗಿಸುವುದು.

ಅಂದಾಜು ಫಲಿತಾಂಶ:

      ಮೂಲಭೂತ ಸೌಕರ್ಯ ಒದಗಿಸುವುದರಿಂಧ ಲ್ಯಾಂಪ್ಸ್ ಸಹಕಾರ ಸಂಘಗಳ ಸದಸ್ಯರು ಸಂಗ್ರಹಿಸಿದ ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ದೊರಕಿ ಅವರು ಆರ್ಥಿಕವಾಗಿ ಲಾಭ ಪಡೆಯುತ್ತಾರೆ.

Top

4. ಯಶಸ್ವಿನಿ:

ಆಯವ್ಯಯ ಅವಕಾಶ ( ಗ್ರಾಮೀಣ ) :             ರೂ. 13300.00/- ಲಕ್ಷಗಳು
ಆರ್ಥಿಕ ಸಹಾಯದ ವಿಧ:     ಸಹಾಯಧನ

ಯೋಜನೆಯ ಉದ್ದೇಶ:

      ಸಹಕಾರಿಗಳಲ್ಲಿ ಆರೋಗ್ಯ ನಿಗಾದ ಗುಣಮಟ್ಟವನ್ನು ವೃದ್ಧಿಸುವುದು ಹಾಗೂ ಆ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದು, ತನ್ಮೂಲಕ ಸಹಕಾರಿ ಸದಸ್ಯರ ಒಟ್ಟಾರೆ ಆರೋಗ್ಯ ಮತ್ತು ಕ್ಷೇಮ ಇರುವಂತೆ ನೋಡಿಕೊಳ್ಳುವುದು. 2014-15 ನೇ ಸಾಲಿನಲ್ಲಿ ಈ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಲಾಗಿದೆ.

ಅಂದಾಜು ಫಲಿತಾಂಶ:

     ಗ್ರಾಮೀಣ ಸಹಕಾರಿಗಳಿಗೆ 722 ನೆಟ್ ವರ್ಕ್ ಆಸ್ಪತ್ರೆಗಳ ಮೂಲಕ ಸುಮಾರು 823 ವಿವಿಧ ರೀತಿಯ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಉಚಿತವಾಗಿ ದೊರಕಿಸುವುದರಿಂದ ಅವರ ಆರೋಗ್ಯ ಮತ್ತು ಜೀವನ ಮಟ್ಟದಲ್ಲಿ ಸುಧಾರಣೆ ಉಂಟಾಗಲು ಸಹಾಯಕವಾಗುತ್ತದೆ.

#

Top

 

5.ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಹಣಕಾಸು ಸಹಾಯ

ಆಯವ್ಯಯ ಅವಕಾಶ:                       ರೂ.17.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:                ಸಹಾಯಧನ

ಯೋಜನೆಯ ಉದ್ದೇಶ:

      ಈ ಯೋಜನೆಯಡಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಹೊಂದಲು / ಆಸ್ತಿ ನಿರ್ಮಾಣ ಮಾಡಿಕೊಳ್ಳಲುಹಣಕಾಸು ಸಹಾಯ ನೀಡಲಾಗುವುದು.

ಅಂದಾಜು ಫಲಿತಾಂಶ :

      ಫಲಾನುಭವಿ ಸಹಕಾರ ಸಂಘಗಳಲ್ಲಿ ಮೂಲಭೂತ ಸೌಕರ್ಯ/ಆಸ್ತಿ ನಿರ್ಮಾಣವಾಗುವುದರಿಂಧ ಸಂಘಗಳ ವ್ಯವಹಾರ ಹೆಚ್ಚಿ ಉದ್ದೇಶಗಳು ಈಡೇರಲು ಸಾಧ್ಯವಾಗುತ್ತದೆ.

6. ಸಾಲ ಮನ್ನಾ :

ಆಯವ್ಯಯ ಅವಕಾಶ:                       ರೂ.400000.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:               

ಯೋಜನೆಯ ಉದ್ದೇಶ:

       ರಾಜ್ಯದ ರೈತರು ಕೃಷಿ ಸಹಕಾರ ಸಂಘ/ ಬ್ಯಾಂಕುಗಳಿಂದ ಪಡೆದ ಅಲ್ಪಾವಧಿ ಬೆಳೆ ಸಾಲದ ಅಸಲು ಮತ್ತು ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದು.

     2017-18 ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳಲ್ಲಿ ಸಾಲ ಪಡೆದು ದಿನಾಂಕ:20.06.2017 ಬಾಕಿ ಇರುವ ಅಲ್ಪಾವಧಿ ಕೃಷಿ ಸಾಲದಲ್ಲಿ ರೂ.50000/- ವರೆಗೆ ಮನ್ನಾ. ಇದರಿಂದ 22.27 ಲಕ್ಷ ರೈತರಿಗೆ ರೂ.8165.00 ಕೋಟಿಗಳ ಪ್ರಯೋಜನ.

7. ಸ್ವಸಹಾಯ ವರ್ಗಗಳಿಗೆ ಸಾಲಗಳ ಮೇಲಣ ಬಡ್ಡಿ ಸಹಾಯಧನ:

ಆಯವ್ಯಯ ಅವಕಾಶ:             ರೂ. 6000.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:      ಸಹಾಯಧನ

ಯೋಜನೆಯ ಉದ್ದೇಶ:

      ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ.4 ಕ್ಕೆ ಇಳಿಸುವುದು ಹಾಗೂ ಸರ್ಕಾರದ ಬದ್ಧತೆಯಂತೆ ಸಹಕಾರ ಸಂಘಗಳಿಂದ ಮಂಜೂರಾಗುವ ಸಾಲದ ಮೇಲೆ ಬಡ್ಡಿ ಸಹಾಯಧನವನ್ನು ಒದಗಿಸುವುದು.

ಅಂದಾಜು ಫಲಿತಾಂಶ:

      ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಹಾಗೂ ಮಹಿಳೆಯರಿಗೆ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ದೊರೆಯಲು ಸಹಾಯವಾಗುತ್ತದೆ.

8. ವಿವಿಧ ಸಹಕಾರ ಸಂಸ್ಥೆಗಳಲ್ಲಿ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರನ್ನು ಸದಸ್ಯರನ್ನಾಗಿ ನೋಂದಾಯಿಸುವ ಬಗ್ಗೆ ಸಹಾಯಧನ :

ಆಯವ್ಯಯ ಅವಕಾಶ:             ರೂ666.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:      ಸಹಾಯಧನ

ಯೋಜನೆಯ ಉದ್ದೇಶ:

      ಯೋಜನೆಯ ಪ್ರಮುಖ ಉದ್ದೇಶ ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ನೋಂದಾಯಿಸಲು ಸಹಾಯಧನ ನೀಡುವುದು ಆ ಮೂಲಕ ಆಯಾ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯವನ್ನು ಅವರಿಗೆ ಒದಗಿಸುವುದು. ಆಯಾ ಸಂಘದ ಒಂದು ಷೇರಿನ ಮೊತ್ತ ಅಥವಾ ಗರಿಷ್ಠ ರೂ.500/- ಇವುಗಳ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮಂಜೂರು ಮಾಡುವುದು.

ಅಂದಾಜು ಫಲಿತಾಂಶ:

      ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಮೂಲಕ ಆಯಾ ಸಹಕಾರ ಸಂಘಗಳಲ್ಲಿದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವರು.

9.ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಉನ್ನತೀಕರಣ ನಿಧಿ :Top

ಆಯವ್ಯಯ ಅವಕಾಶ:             ರೂ. 5.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:      ಸಹಾಯಧನ

ಯೋಜನೆಯ ಉದ್ದೇಶ:

      ಸಹಕಾರ ಇಲಾಖೆಯ ಅಧಿಕಾರಿ ಮತ್ತು ನೌಕರರಿಗೆ ವಿವಿಧ ತರಬೇತಿಗಳನ್ನು ನೀಡುವುದರ ಮೂಲಕ ಇಲಾಖೆಯ ಸಿಬ್ಬಂದಿ ವರ್ಗದವರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು.

ಅಂದಾಜು ಫಲಿತಾಂಶ:

     ಅಧಿಕಾರಿ/ಸಿಬ್ಬಂದಿಗಳಿಗೆ ತಮ್ಮ ಗುಣಮಟ್ಟದ ಪರಿಣಾಮಕಾರಿಯಾದ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ತರಬೇತಿ ನೀಡುವುದರಿಂದ ಅವರ ಕಾರ್ಯ ದಕ್ಷತೆಯಲ್ಲಿ ಸುಧಾರಣೆ ಉಂಟಾಗುತ್ತದೆ. ಅಧಿಕಾರಿ/ಸಿಬ್ಬಂದಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಇಲಾಖಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸಂಬಂಧಿಸಿದ ಸಹಕಾರಿ ಸಂಸ್ಥೆಗಳಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಾಯವಾಗುತ್ತದೆ.


#

10.ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವ್ಥದ್ಧಿ ಬ್ಯಾಂಕ್ ಗೆ ಸಾಲ :

ಆಯವ್ಯಯ ಅವಕಾಶ:             ರೂ.456.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:      ಸಾಲ

ಯೋಜನೆಯ ಉದ್ದೇಶ:

      ಕಸ್ಕಾರ್ಡ್ ಬ್ಯಾಂಕ್ ಗೆ ಅವಧಿ ಸಾಲವನ್ನು ವಿಸ್ತರಿಸಿ, ಆ ಮೂಲಕ ಪಿಕಾರ್ಡ್ ಬ್ಯಾಂಕ್ಗಳಿಗೆ ಸಾಲ ದೊರೆಯುವಂತಾಗಲು, ರಾಜ್ಯ ಸರ್ಕಾರದ ಶೇ. 4-5ರ ಪಾಲನ್ನು ಭರಿಸುವುದು.

ಅಂದಾಜು ಫಲಿತಾಂಶ:

      ನಬಾರ್ಡ್ ನಿಂದ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪುನರ್ಧನ ಸೌಲಭ್ಯ ಪಡೆಯುತ್ತದೆ. ಇದರಿಂದಾಗಿ ಸಕಾಲದಲ್ಲಿ ರೈತರಿಗೆ ಸುಲಭ ದರದಲ್ಲಿ ದೀರ್ಘಾವಧಿ ಸಾಲ ನೀಡಲು ಅವಕಾಶವಾಗುತ್ತದೆ ಹಾಗೂ ಆ ಮೂಲಕ ರೈತರ ಜೀವನ ಮಟ್ಟ ಸುಧಾರಿಸುತ್ತದೆ.

 

11. ಸ್ವಸಹಾಯ ಗುಂಪುಗಳಿಗೆ ಗಣಕಯಂತ್ರ ಒದಗಿಸಿ ಗಣೀಕಿಕರಣಗೊಳಿಸಲು ಹಾಗೂ ಪ್ಯಾಕ್ಸ್ ಗಳಿಗೆ ತಂತ್ರಾಂಶ ಒದಗಿಸಲು ಸರ್ಕಾರದ ಸಹಾಯಧನ :

ಆಯವ್ಯಯ ಅವಕಾಶ:            ರೂ.15.00 ಲಕ್ಷಗಳು
ಆರ್ಥಿಕ ಸಹಾಯದ ವಿಧ:     ಷೇರು ಬಂಡವಾಳ

ಯೋಜನೆಯ ಉದ್ದೇಶ:

      ಸ್ವಸಹಾಯ ಗುಂಪುಗಳು ಹಾಗೂ ಪ್ಯಾಕ್ಸ್ ಗಳಿಗೆ ಗಣಕೀಕರಣಗೊಳಿಸಲು ಅವಶ್ಯಕವಿರುವ ತಂತ್ರಾಂಶವನ್ನು ಒದಗಿಸಿ ಸಬಲೀಕರಣಗೊಳಿಸುವುದು.

ಅಂದಾಜು ಫಲಿತಾಂಶ:

      ಸ್ವಸಹಾಯ ಗುಂಪುಗಳು ಹಾಗೂ ಪ್ಯಾಕ್ಸ್ ಗಳನ್ನು ಗಣಕೀಕರಣಗೊಳಿಸುವುದರಿಂದ ಬಿಲ್ಲುಗಳನ್ನು ನಿಗಧಿತ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವುದು ಹಾಗೂ ನಿಖರವಾದ ಮಾಹಿತಿಯನ್ನು ತಯಾರಿಸಲು ಸಾಧ್ಯವಾಗುವುದು.

Top

12. ಸಹಕಾರಿ ಚುನಾವಣಾ ಪ್ರಾಧಿಕಾರ .

ಆಯವ್ಯಯ ಅವಕಾಶ:            ರೂ.202.00 ಲಕ್ಷಗಳು

ಯೋಜನೆಯ ಉದ್ದೇಶ:

       97 ನೇಯ ಸಂವಿಧಾನದ ತಿದ್ದುಪಡಿಯ ಹಿನ್ನಲೆಯಲ್ಲಿ ಸಹಕಾರ ಚುನಾವಣಾ ಆಯೋಗವನ್ನು ರಚಿಸಲಾಗಿದೆ. ರಾಜ್ಯದಲ್ಲಿನ ಸಹಕಾರ ಸಂಘಗಳಿಗೆ ನಡೆಯುವ ಎಲ್ಲಾ ಚುನಾವಣೆಗಳನ್ನು ನಡೆಸುವ ಮತ್ತು ತತ್ಸಂಬಂಧಿತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣವು ಸಹಕಾರ ಚುನಾವಣಾ ಆಯೋಗದಲ್ಲಿ ನಿಹಿತವಾಗಿರುತ್ತದೆ.

ಅಂದಾಜು ಫಲಿತಾಂಶ:

     ರಾಜ್ಯದಲ್ಲಿನ ಸಹಕಾರ ಸಂಘಗಳಿಗೆ ನಡೆಯುವ ಎಲ್ಲಾ ಚುನಾವಣೆಗಳನ್ನು ನಡೆಸುವ ಮತ್ತು ತತ್ಸಂಬಂಧತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣವು ಸಹಕಾರ ಚುನಾವಣಾ ಆಯೋಗದಲ್ಲಿ ನಿಹಿತವಾಗಿರುತ್ತದೆ.

13. ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ:

ಆಯವ್ಯಯ ಅವಕಾಶ :            ರೂ. 5000.00 ಲಕ್ಷಗಳು

ಯೋಜನೆಯ ಉದ್ದೇಶ :

       ರೈತರಿಗೆ ಬರ ಪರಿಹಾರವಾಗಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿ ಆರ್ಥಿಕ ಹೊರೆಯನ್ನು ಇಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ಬರ ಪರಿಹಾರವಾಗಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಯೋಜನೆಯಿಂದ ರೈತರಿಗೆ ಪುನಃ ಅಲ್ಪಾವಧಿ ಸಾಲವು ದೊರೆಯುವುದರಿಂದ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತದೆ.

14. ಕೆ.ಸಿ.ಸಿ ಬ್ಯಾಂಕ್ ಧಾರವಾಡ ಮತ್ತು ಡಿ.ಸಿ.ಸಿ. ಬ್ಯಾಂಕ್ ವಿಜಯಪುರ ಬ್ಯಾಂಕ್ ಗಳಿಗೆ ಅನುದಾನ :

ಆಯವ್ಯಯ ಅವಕಾಶ:            ರೂ.5000.00 ಲಕ್ಷಗಳು

       ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಧಾರವಾಡ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ವಿಜಯಪುರ ಬ್ಯಾಂಕುಗಳ ಶತಮಾನೋತ್ಸವದ ಅಂಗವಾಗಿ ನಿರ್ಮಾಣ ಮಾಡುವ ಕಟ್ಟಡಕ್ಕೆ ತಲಾ 5 ಕೋಟಿ ರೂ.ಗಳಂತೆ ಸರ್ಕಾರ ಮತು ಅಪೆಕ್ಸ್ ಬ್ಯಾಂಕ್ ವತಿಯಿಂದ ಸಹಾಯಧನವನ್ನು ನೀಡಲಾಗುವುದು.

ಜಿಲ್ಲಾ ವಲಯ ಯೋಜನೆಗಳು:

ಜಿಲ್ಲಾ ವಲಯದಡಿ ಒಟ್ಟು 09 ಯೋಜನಾ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಒಟ್ಟು ರೂ 595.00 ಲಕ್ಷಗಳನ್ನು ಒದಗಿಸಲಾಗಿರುತ್ತದೆ.

1. ವಿವಿಧ ವರ್ಗದ ಸಹಕಾರಿ ಸಂಸ್ಥೆಗಳಿಗೆ ಸಹಾಯಧನ /ಎನ್.ಸಿ.ಡಿ.ಸಿ.ಯೋಜನೆ. (ಸಹಾಯಧನ)
2. ಹಾಲು ಉತ್ಪಾದನಾ ಮಹಿಳಾ ಸಹಕಾರ ಸಂಘಗಳಿಗೆ ಮೂಲಭೂತ ಸಕೌರ್ಯಗಳಿಗಾಗಿ ಆರ್ಥಿಕ ಸಹಾಯ .
3. ವಿವಿಧ ವರ್ಗದ ಸಹಕಾರ ಸಂಘಗಳಿಗೆ ಷೇರು ಬಂಡವಾಳದ ಸಹಾಯ ( ಸಾಮಾನ್ಯ / ನಬಾರ್ಡ್ /ಎನ್.ಸಿ.ಡಿ.ಸಿ)
4. ಇತರೆ ಸಹಕಾರ ಸಂಘಗಳ ಷೇರು ಬಂಡವಾಳ
5. ವಿವಿಧ ವರ್ಗದ ಸಹಕಾರ ಸಂಘಗಳಿಗೆ ಸಾಲದ ಸಹಾಯ (ಎನ್.ಸಿ.ಡಿ.ಸಿ)
6. ಸಾರ್ವತ್ರಿಕ ಕಾರ್ಯಗಾರ ನಿರ್ಮಾಣಕ್ಕಾಗಿ ಮಹಿಳಾ ಸಹಕಾರ ಸಂಘಗಳಿಗೆ ಸಾಲಗಳು.
7. ವಿಶೇಷ ಘಟಕ ಯೋಜನೆಯಡಿ - ಆಸ್ತಿಗಳ ಸೃಷ್ಟಿಗಾಗಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿಅಭಿವೃದ್ದಿ ಬ್ಯಾಂಕುಗಳು ಮಂಜೂರು ಮಾಡಿದ ಸಾಲಗಳ ಮೇಲೆ ಶೇಕಡ 60 ರಷ್ಟು ಸಹಾಯಧನ
8. ಮಹಿಳಾ ಸಹಕಾರ ಸಂಘಗಳಲ್ಲಿ ಹೂಡಿಕೆಗಳು
9. ವ್ಯವಹಾರ ಕಟ್ಟಡಗಳ ನಿರ್ಮಾಣ ಮತ್ತು ಮಹಿಳಾ ಸಹಕಾರ ಸಂಘಗಳಿಗೆ ಸಾಲಗಳು.

 

 

-*-*-*-*-